ಮೈಸೂರು

ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ ಕಳುವು

ಮೈಸೂರು,ಫೆ.21:-ರಸ್ತೆ ಪಕ್ಕ ನಿಲ್ಲಿಸಲಾಗಿದ್ದ ಕಾರಿನಲ್ಲಿಟ್ಟಿದ್ದ ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳರು ಕದ್ದೊಯ್ದ ಘಟನೆ ಸಯ್ಯಾಜಿರಾವ್ ರಸ್ತೆಯಲ್ಲಿ ನಡೆದಿದೆ.

ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿನ ಕಾವೇರಿ ಎಂಪೋರಿಯಂ ಬಳಿ ರಮೇಶ ಕೆದಿಲಾಯ ಎಂಬವರು ಕಾರನ್ನು ನಿಲ್ಲಿಸಿ, ಸ್ವಲ್ಪ ಕೆಲಸದ ನಿಮಿತ್ತ ಲಾಕ್ ಮಾಡಿ ಹೋಗಿದ್ದರು. ಆದರೆ ಅವರು ವಾಪಸ್ಸು ಬಂದಾಗ ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಚಿನ್ನಾಭರಣ, ಬಟ್ಟೆಗಳಿದ್ದ ಸೂಟ್ ಕೇಸ್, ಹ್ಯಾಂಡ್ ಬ್ಯಾಗ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಈ ಕುರಿತು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್.ಎಸ್.ಎಚ್)

Leave a Reply

comments

Related Articles

error: