
ದೇಶಪ್ರಮುಖ ಸುದ್ದಿ
ಪಾಕ್ ಗುಂಡಿನ ದಾಳಿಗೆ ಬಿಎಸ್ಎಫ್ ಯೋಧ ಬಲಿ
ಶ್ರೀನಗರ,ಫೆ 21-ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ತಂಗ್ ಧಾರ್ ನ ಗಡಿನಿಯಂತ್ರಣ ರೇಖೆ ಬಳಿ ನಡೆಸಿದ ಗುಂಡಿನ ದಾಳಿಗೆ ಬಿಎಸ್ಎಫ್ ನ ಯೋಧ ಹುತಾತ್ಮರಾಗಿದ್ದಾರೆ.
ಎಸ್.ಕೆ. ಮುರ್ಮು (28) ಮೃತಪಟ್ಟ ಯೋಧ. ಮಂಗಳವಾರ ಸಂಜೆ ಪಾಕ್ ಸೈನಿಕರು ನಡೆಸಿದ ಅಪ್ರಚೋದಿನ ಗುಂಡಿನ ದಾಳಿಗೆ ಸಿಲುಕಿ ಎಸ್.ಕೆ.ಮುರ್ಮು ಅವರಿಗೆ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿತ್ತು. ಇವರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬಿಹಾರದ ಜಮುಯಿ ಜಿಲ್ಲೆಯ ನಿವಾಸಿಯಾಗಿರುವ ಮುರ್ಮು ಅವರು 2013ರಲ್ಲಿ ಬಿಎಸ್ ಎಫ್ ಗೆ ಸೇರ್ಪಡೆಗೊಂಡಿದ್ದರು. (ವರದಿ-ಎಂ.ಎನ್)