ದೇಶಪ್ರಮುಖ ಸುದ್ದಿ

ಇನ್ನು ಕನ್ನಡದಲ್ಲೇ ಬರೆಯಬಹುದು ರೈಲ್ವೇ ನೇಮಕಾತಿ ಪರೀಕ್ಷೆ; ಅರ್ಜಿ ದಿನಾಂಕ ವಿಸ್ತರಣೆ

ಬೆಂಗಳೂರು (ಫೆ.21): ಕನ್ನಡ ಭಾಷೆಯೂ ಸೇರಿದಂತೆ ದೇಸಿ ಭಾಷೆಗಳಲ್ಲಿ ರೈಲ್ವೆ ಲಿಖಿತ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ರೈಲ್ವೇ ಇಲಾಖೆಯಲ್ಲಿ 90 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಕೆಲವು ದಿನಗಳ ಹಿಂದೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಗ್ರೂಪ್ ‘ಸಿ’ ವಿಭಾಗದ ಲೆವೆಲ್ – 1ರಲ್ಲಿನ ಹುದ್ದೆಗಳಾದ ಟ್ರ್ಯಾಕ್ ಮೇಂಟೇನರ್, ಪಾಯಿಂಟ್ಸ್ ಮ್ಯಾನ್, ಹೆಲ್ಪರ್, ಗೇಟ್ ವುನ್, ಪೋರ್ಟರ್ ಹಾಗೂ ಇದೇ ವಿಭಾಗದ ಲೆವಲ್ – 2ರ ಹುದ್ದೆಗಳಿಗೆ ಕನಿಷ್ಠ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ರೈಲ್ವೆ ಖಾತೆ ಸಚಿವ ಪಿಯೂಷ್ ಗೊಯೇಲ್ ಅವರು ಈ ಕುರಿತು ಟ್ವಿಟ್ ಮಾಡಿದ್ದು, ಕನ್ನಡ, ಮರಾಠಿ, ತಮಿಳು, ತೆಲಗು ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು ಎಂದು ಹೇಳಿದ್ದಾರೆ. ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿ ಮಾಡಿದ್ದ ಗರಿಷ್ಠ ವಯೋಮಿತಿಯನ್ನೂ ಪರಿಷ್ಕರಣೆ ಮಾಡಿ ಹೆಚ್ಚಿಸಲಾಗಿದೆ. ಇದರೊಂದಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಸಹ ವಿಸ್ತರಣೆ ಮಾಡಲಾಗಿದೆ.

(ಎನ್‍.ಬಿ)

Leave a Reply

comments

Related Articles

error: