ಸುದ್ದಿ ಸಂಕ್ಷಿಪ್ತ

ಫೆ.23ರಂದು ಪೌರ ಕಾರ್ಮಿಕರಿಗೆ ನಮನ : ಆರೋಗ್ಯ ತಪಾಸಣಾ ಶಿಬಿರ

ಮೈಸೂರು,ಫೆ.21 : ಪೌರ ಕಾರ್ಮಿಕರಿಗೆ ನಮನ ಕಾರ್ಯಕ್ರಮ ಅಂಗವಾಗಿ ಪೌರಕಾರ್ಮಿಕರಿಗೆ ಹಾಗೂ ಕುಟುಂಬವರ್ಗದವರಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಟೌನ್ ಹಾಲ್ ನಲ್ಲಿ  ಫೆ.23ರ ಆಯೋಜಿಸಿದೆ.

ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಇಸಿಜಿ ತಪಾಸಣಾ, ಹೃದಯ ತಜ್ಞ ವೈದ್ಯರೊಂದಿಗೆ ಸಮಾಲೋಚನೆ, ನೇತ್ರದೋಷ ಮತ್ತು ನೇತ್ರ ಪೊರೆ, ಚರ್ಮರೋಗ, ಶ್ರವಣ ದೋಷ,  ಬ್ರಸ್ಟ್ ಕ್ಯಾಸ್ಟರ್ ತಪಾಸಣೆ ನಡೆಸಲಾಗುವುದು. ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಕೆ.ಆರ್.ಆಸ್ಪತ್ರೆ ಚರ್ಮರೋಗ ವಿಭಾಗದ ವೈದ್ಯರು ಶಿಬಿರದಲ್ಲಿ ಭಾಗಿಯಾಗುವರು.

ಬೆಳಗ್ಗೆ 10 ರಿಂದ 1 ರವರಗೆ ಕುಟುಂಬದವರಿಗೆ ಮಧ್ಯಾಹ್ನದ ನಂತರ ಪೌರಕಾರ್ಮಿಕರಿಗೆ ತಪಾಸಣೆ ನಡೆಸಲಾಗುವುದು.. (ಕೆ.ಎಂ.ಆರ್)

Leave a Reply

comments

Related Articles

error: