ಪ್ರಮುಖ ಸುದ್ದಿಮೈಸೂರು

ಮೈಸೂರು ಮಹಾಪೌರರ ಚುನಾವಣೆ ಡಿ.7ಕ್ಕೆ

ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನದ ಚುನಾವಣೆ ಡಿ.7ಕ್ಕೆ ನಿಗದಿಯಾಗಿದೆ.

ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಡಿ.7 ರಂದು ಬೆಳಗ್ಗೆ 11.30ಕ್ಕೆ ಚುನಾವಣಾಧಿಕಾರಿಗಳೂ ಆದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ ಎಂದು ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ. ನ.10ರಂದು ರಾಜ್ಯ ಸರಕಾರ ಮೈಸೂರು ಸೇರಿ ರಾಜ್ಯದ ಉಳಿದ ನಗರ ಪಾಲಿಕೆಗಳ ಮಹಾಪೌರರ ಮತ್ತು ಉಪ ಮಹಾಪೌರರ ಮೀಸಲಾತಿಯನ್ನು ಪ್ರಕಟಿಸಿತ್ತು.

ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗ(ಮಹಿಳೆ)ಗೆ ಮೀಸಲಾಗಿದೆ. ಮೊದಲು ಮೇಯರ್ ಚುನಾವಣೆ ನಡೆಯಲಿದ್ದು, ಬಳಿಕ 4 ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹಾಲಿ ಮೇಯರ್ ಬಿ.ಎಲ್. ಭೈರಪ್ಪ, ಉಪ ಮೇಯರ್ ವನಿತಾ ಪ್ರಸನ್ನ ಅವರ ಅಧಿಕಾರಾವಧಿ ನ.12ಕ್ಕೆ ಅಂತ್ಯಗೊಂಡಿದ್ದರೂ ಮಹಾನಗರಪಾಲಿಕೆ ಕಾಯಿದೆ ಪ್ರಕಾರ ಮುಂದಿನ ಮಹಾಪೌರರ ಚುನಾವಣೆ ನಡೆಯುವವರೆಗೂ ಅಧಿಕಾರದಲ್ಲಿ ಇರುತ್ತಾರೆ.

Leave a Reply

comments

Related Articles

error: