ಕರ್ನಾಟಕ

1.37 ಕೋಟಿ ರು. ಹಣವಿದ್ದ ವ್ಯಾನ್‍ನೊಂದಿಗೆ ಚಾಲಕ ಪರಾರಿ

ಬೆಂಗಳೂರು: ಎಟಿಎಂ ಘಟಕಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದ್ದ ಖಾಸಗಿ ಕಂಪನಿಯ ಚಾಲಕನೊಬ್ಬ 1.37 ಕೋಟಿ ರು. ಹಣವಿದ್ದ ವಾಹನದೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೆ.ಜಿ.ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎದುರು ಬುಧವಾರ ನಡೆದಿದೆ.

ಚಾಲಕ ಕದ್ದೊಯ್ದಿರುವ 1.37 ಕೋಟಿ ರು.ನಲ್ಲಿ 1.36 ಕೋಟಿ 2 ಸಾವಿರ ಹಾಗೂ 1 ಲಕ್ಷ 100ರ ನೋಟುಗಳಿವೆ. ಕಾಕ್ಸ್‍ಟೌನ್ ರಸ್ತೆಯ ‘ಲಾಗಿ ಕ್ಯಾಷ್ ಮ್ಯಾನೇಜ್‍ಮೆಂಟ್ ಕಂಪನಿ’ಯ ವಾಹನ ಚಾಲಕ ಲಿಂಗರಾಜಪುರ ನಿವಾಸಿ ಡಾಮ್ನಿಕ್ ಹಣದೊಂದಗೆ ಪರಾರಿಯಾದವನು. ಆರೋಪಿ ಪತ್ತೆಗೆ 4 ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

ವಾಹನದ ಜೊತೆಯಲ್ಲಿದ್ದ ಸೆಕ್ಯೂರಿಟಿ ಗಾರ್ಡ್‍ಗಳಿಬ್ಬರು ಮತ್ತು ಕ್ಯಾಷ್ ಕಂಪನಿಯ ಸಹಾಯಕ ವ್ಯವಸ್ಥಾಪಕ ಶಿವಕುಮಾರ್ ಕಣ್ತಪ್ಪಿಸಿ ಆರೋಪಿ ಹಣದೊಂದಿಗೆ ಪರಾರಿಯಾಗಿದ್ದಾನೆ.

ವ್ಯಾನ್ ಪತ್ತೆ:  ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಹಣ ಸಾಗಿಸುವ ವ್ಯಾನ್ ಪತ್ತೆಯಾಗಿದ್ದು, ಸುಮಾರು 1 ಕೋಟಿ ರು.ನೊಂದಿಗೆ ಚಾಲಕ ತನ್ನ ಕುಟುಂಬ ಸಮೇತ ಪರಾರಿಯಾಗಿದ್ದಾನೆ. 2 ಸಾವಿರ ರು. ನೋಟುಗಳು ತುಂಬಿದ್ದ ಬಾಕ್ಸ್ ಎತ್ತಿಕೊಂಡು ವ್ಯಾನ್‍ಅನ್ನು ಬಿಟ್ಟು ಪಲಾಯನ ಮಾಡಿದ್ದಾನೆ. ಆತನಿಗಾಗಿ ಬೆಂಗಳೂರು ಪೊಲೀಸರು ತೀವ್ರ ಬಲೆ ಬೀಸಿದ್ದಾರೆ.

Leave a Reply

comments

Related Articles

error: