ಮೈಸೂರು

ಶ್ರೀಚಾಮರಾಜೇಂದ್ರ ಒಡೆಯರ್ ಸ್ಮರಿಸಿದ ಅರಸು ಚಿಂತಕರ ಚಾವಡಿ

ಮೈಸೂರು,ಫೆ.22:- ಅರಸು ಚಿಂತಕರ ಚಾವಡಿ ವತಿಯಿಂದ ಶ್ರೀಚಾಮರಾಜೇಂದ್ರ ಒಡೆಯರ್ ಅವರ 155ನೇ ಹುಟ್ಟುಹಬ್ಬದ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪಅರ್ಪಿಸಿ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅರಸು ಚಿಂತಕರ ಚಾವಡಿಯ ಪ್ರಮುಖರು ಶ್ರೀಚಾಮರಾಜೇಂದ್ರ ಒಡೆಯರ್ ಪ್ರತಿಮೆಗೆ ಪುಷ್ಪಾರ್ಚನೆಗೈದು ಗೌರವ ಸಮರ್ಪಿಸಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಕೆಂಪರಾಜೇ ಅರಸ್ ಚಾಮರಾಜೇಂದ್ರ ಒಡೆಯರ್ ಅವರ ಆಳ್ವಿಕೆಯ ಅವಧಿಯಲ್ಲಿ ಜನರಿಗೆ ಅನುಕೂಲವಾಗುವಂತಹ ಕೆಲಸಕಾರ್ಯಗಳನ್ನು ಮಾಡಿದ್ದಾರೆ. ಅಂಥಹವರನ್ನು ಇಂದು ನಾವು ಸ್ಮರಿಸಬೇಕಾಗಿದೆ ಎಂದರು.

ಈ ಸಂದರ್ಭ ಕಿರಣ್ ಜಿ.ಎಸ್ ಅರಸ್, ಹೆಚ್.ಡಿ.ನವೀನ್ ರಾಜೇ ಅರಸ್, ಡಿ.ಜಯದೇವರಾಜೇ ಅರಸ್, ಎ.ಬಿ.ಕಿಶೋರ್ ಅರಸ್, ಮಾದರಾಜೇ ಅರಸ್, ಎನ.ಬಿ.ಶರತ್ ರಾಜೇ ಅರಸ್, ಹೆಚ್.ಆರ್.ಗೋಪಿ ಅರಸ್, ಎಂ.ಎಸ್.ಮಹೇಶ್ ರಾಜೇ ಅರಸ್, ಕೃಷ್ಣೇ ಅರಸ್, ರಘುರಾಜೇ ಅರಸ್, ಮಹೇಶ್ ರಾಜೇ ಅರಸ್  ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: