ಕರ್ನಾಟಕಮೈಸೂರು

ಗಣೇಶ ಮೂರ್ತಿಗಳ ಆಕರ್ಷಕ ಮೆರವಣಿಗೆ, ಸಾಮೂಹಿಕ ವಿಸರ್ಜನೆ

ಡ್ರಮ್ ಬಾರಿಸುತ್ತಾ ದೇವರಾಜು ಅರಸು ರಸ್ತೆಯಲ್ಲಿ ಬುಧವಾರ ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ದ ನೂರಾರು ಭಕ್ತರು ಸಾಮೂಹಿಕ ವಿಸರ್ಜನೆ ಮಾಡಿದರು.

ಸಾರ್ವಜನಿಕ ಗಣೇಶೋತ್ಸವಕ್ಕೆ 122 ವರ್ಷವಾಗಿದೆ. ಬಾಲಗಂಗಾಧರ ತಿಲಕರು ಜನತೆಯನ್ನು ಒಂದೆಡೆ ಸೇರಿಸಲು ಗಣೇಶ ಹಬ್ಬವನ್ನಾಚರಿಸಲು ಆರಂಭಿಸಿದರು. ಮೆರವಣಿಗೆಯಲ್ಲಿ ಭಜನೆ, ಸಾಂಪ್ರದಾಯಿಕ ನೃತ್ಯಗಳು ಗಮನ ಸೆಳೆದವು. ಮಕ್ಕಳು ಮೆರವಣಿಗೆಯುದ್ದಕ್ಕೂ ಸಾಲು ಸಾಲಿನಲ್ಲಿ ನಡೆದು ಬಂದರು.

ವೀರನಗೆರೆ ಗಣಪತಿ ದೇವಳದ ಬಳಿ ಸಂಸದ ಪ್ರತಾಪ್ ಸಿಂಹ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ 25 ಗಣೇಶನ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಲ್ಲಿ ವಿಸರ್ಜನೆಗೊಳಿಸಲಾಯಿತು.

ಮೆರವಣಿಗೆಯಲ್ಲಿ ದ್ವಿದಂತ ಯುವಕ ಸಂಘ, ರಾಮಸೇನಾ ಘಟಕ, ವಿನಾಯಕ ಯುವ ಸೇನೆ, ಜೈ ಭಜರಂಗಿ ಯುವಸೇನೆ, ತಿಲಕ ನಗರ ಹಿತರಕ್ಷಣಾ ವೇದಿಕೆ ಮತ್ತಿತರರ ಸಂಘಟನೆಗಳು ಪಾಲ್ಗೊಂಡಿದ್ದವು.

ಸೆಪ್ಟೆಂಬರ್ 5ರಿಂದಲೇ ಆರಂಭಗೊಂಡಿದ್ದ ಗಣೇಶನ ಹಬ್ಬಕ್ಕೆ ವೈಭವಯುತ ಮೆರವಣಿಗೆಯ ಮೂಲಕ ತೆರೆ ಎಳೆಯಲಾಯಿತು.

ಕ್ಯಾಪ್ಷನ್: ಬುಧವಾರ ಕಾವೇರಿ ನದಿಯಲ್ಲಿ ವಿಸರ್ಜನೆಗೆ ತೆರಳಿದ ಗಣೇಶ ಮೂರ್ತಿಯ ಆಕರ್ಷಕ ಮೆರವಣಿಗೆ.

Leave a Reply

comments

Related Articles

error: