ಮೈಸೂರು

ಸದ್ವಿದ್ಯಾ ಪ್ರೌಢಶಾಲೆಗೆ ಒಲಿದ ‘ಟೈಗರ್ ಕಪ್’

ಸೈಕಲ್ ಪ್ಯೂರ್ ಅಗರಬತ್ತೀಸ್ ವತಿಯಿಂದ ಆಯೋಜಿಸಿದ್ದ ‘ಕೆಎಸ್‍ಸಿಎ ಟೈಗರ್- ಕಪ್’ ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ಸದ್ವಿದ್ಯಾ ಪ್ರೌಢಶಾಲೆಯ ತಂಡ ಕೆಎಸ್‍ಸಿಎ ಟೈಗರ್ ಕಪ್‍ ಅನ್ನು ತನ್ನದಾಗಿಸಿಕೊಂಡಿದೆ.

ಎಸ್‍ಜೆಸಿಇ ಮೈದಾನದಲ್ಲಿ ಬುಧವಾರ ನಡೆದ ಅಂತಿಮ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಮೊದಲು ಮೈದಾನಕ್ಕಳಿದ ಸದ್ವಿದ್ಯಾ ಪ್ರೌಢಶಾಲೆ 30 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು 218 ರನ್‍ ಗಳಿಸಿತ್ತು. ಜಯಲಕ್ಷ್ಮೀಪುರಂನ ಸೇಂಟ್ ಜೋಸೆಫ್ ಪ್ರೌಢಶಾಲೆ 128 ರನ್ ಗಳಿಸಲಷ್ಟೇ ಶಕ್ತವಾಯಿತು.

ಸದ್ವಿದ್ಯಾ ಪ್ರೌಢಶಾಲೆಯ ಶಶಾಂಕ್ ಎಸ್‍. ಭಾರದ್ವಾಜ್ ಅವರು 44 ಎಸೆತಗಳಲ್ಲಿ 73 ರನ್‍ಗಳನ್ನು ಗಳಿಸಿದರು. ಆರ್‍, ನಯನ್‍ 77 ಎಸೆತಗಳಲ್ಲಿ 68 ರನ್‍ಗಳನ್ನು ಗಳಿಸಿದರು. ಸೇಂಟ್ ಜೋಸೆಫ್ ಪ್ರೌಢಶಾಲೆಯ ಬಾಲಸಚಿತ್ ಅವರು 6 ಓವರ್‍ಗಳಲ್ಲಿ 38 ರನ್ ನೀಡಿ 2 ವಿಕೆಟ್‍ಗಳನ್ನು ಪಡೆದರೆ, ಎಂ.ಪಿ. ಸುಹಾಸ್ 6 ಓವರ್‍ಗಳಲ್ಲಿ 33 ರನ್‍ಗಳನ್ನು ನೀಡಿ 1 ವಿಕೆಟ್ ಗಳಿಸಿದರು.

ಸದ್ವಿದ್ಯಾ ಶಾಲೆಯ ಆರ್. ನಯನ್ ಟೈಗರ್ ಆಫ್ ದಿ ಮ್ಯಾಚ್, ಶಶಾಂಕ್ ಎಸ್. ಭಾರದ್ವಾಜ್ ಟೈಗರ್ ಆಫ್ ಸೀರೀಸ್, ಎಸ್. ನಿಶಾಂತ್ ಉತ್ತಮ ಬ್ಯಾ‍ಟ್ಸ್‍ಮನ್, ಅಭಿನಂದನ್ ಪ್ರಸಾದ್ ಅವರು ಉತ್ತಮ ಫೀಲ್ಡರ್ ಗೌರವಕ್ಕೆ ಪಾತ್ರರಾದರು.

ಸೇಂಟ್ ಜೋಸೆಫ್ ಶಾಲೆಯ ಸೈಯದ್ ಜಹೂರ್ ಉತ್ತಮ ಬೌಲರ್ ಪ್ರಶಸ್ತಿಗೆ ಆಯ್ಕೆಯಾದರು.

ಎನ್‍ಆರ್‍ ಸಮೂಹದ ನಿರ್ದೇಶಕ ಹಾಗೂ ಮೈಸೂರು ವಾರಿಯರ್ಸ್ ತಂಡದ ಸಹ ಮಾಲೀಕ ಪವನ್ ರಂಗ ಅವರು ವಿಜೇತ ತಂಡಕ್ಕೆ ಟೈಗರ್ ಕಪ್ ವಿತರಿಸಿದರು.

Leave a Reply

comments

Related Articles

error: