ಕರ್ನಾಟಕಪ್ರಮುಖ ಸುದ್ದಿ

ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾಲು ಮರದ ತಿಮ್ಮಕ್ಕ

ಬಿಬಿಸಿ ಪ್ರಕಟಿಸಿದ ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕರ್ನಾಟಕದ ಪರಿಸರವಾದಿ ಸಾಲು ಮರದ ತಿಮ್ಮಕ್ಕ ಸ್ಥಾನ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್‍ನ ತಿಮ್ಮಕ್ಕ ಅವರು ತಮ್ಮ ಗ್ರಾಮದಲ್ಲಿ ಸಾಲು ಮರಗಳನನ್ನು ನೆಟ್ಟು ಜಗತ್ಪ್ರಸಿದ್ಧಿ ಪಡೆದವರು. ಮಕ್ಕಳಿಲ್ಲದ, ನಿರಕ್ಷರಿ ಮಹಿಳೆ ಮರಗಳನ್ನೇ ಮಕ್ಕಳಂತೆ ಬೆಳೆಸಿದ ಸಾಧನೆಯನ್ನು ಗಮನಿಸಿ ಬಿಬಿಸಿ ಅವರನ್ನು 100 ಪ್ರಭಾವಿ ಮಹಿಳೆಯರ ಪಟ್ಟಿಗೆ ಸೇರಿಸಿದೆ.

ಬಿಬಿಸಿ ಕಳೆದ ನಾಲ್ಕು ವರ್ಷಗಳಿಂದ ಜಗತ್ತಿನ ಪ್ರಭಾವಿ ಮಹಿಳೆಯರ ಪಟ್ಟಿ ಬಿಡುಗಡೆ ಮಾಡುತ್ತಿದ್ದು, ಜಗತ್ತನ್ನೇ ಬದಲಿಸಿದ ಶಕ್ತಿಗಳು ಎಂಬ ಧ್ಯೇಯವಾಕ್ಯದಡಿ 2016ರ ಆಯ್ಕೆ ನಡೆದಿದೆ. ಕಲಾವಿದರು, ಇಂಜಿನಿಯರ್‍ಗಳು, ಉದ್ಯಮಿಗಳು, ಕ್ರೀಡಾಳುಗಳು, ಫ್ಯಾಶನ್ ಲೋಕದ ಸಾಧಕರು ಇರುವ 100 ಮಂದಿ ಮಹಿಳೆಯರ ಪಟ್ಟಿಯಲ್ಲಿ ಸನ್ನಿ ಲಿಯೋನ್, ನೇಹಾ ಸಿಂಗ್, ಟ್ರ್ಯಾಕ್ಟರ್ ಕಂಪನಿ ಸಿಇಒ ಮಲ್ಲಿಕಾ ಶ‍್ರೀನಿವಾಸನ್, ಎಂಜಿನಿಯರಿಂಗ್ ವಿದ್ಯಾರ್ಥಿನಿ ಗೌರಿ ಚಿಂದಾರ್ಕರ್ ಅವರೂ ಇದ್ದಾರೆ.

Leave a Reply

comments

Related Articles

error: