ಮನರಂಜನೆ

“ರಂಗ್‍ಬಿರಂಗಿ” ಕಲರ್ ಫುಲ್ ಸಿನಿಮಾ ನಾಳೆ ತೆರೆಗೆ

ಬೆಂಗಳೂರು,ಫೆ.22: ಮಲ್ಲಿಕಾರ್ಜುನ್ ಮುತ್ತಲಗೇರಿ ನಿರ್ದೇಶನದ ‘ರಂಗ್‍ಬಿರಂಗಿ’ ಸಿನಿಮಾದ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ.

ನಿರ್ದೇಶಕ ಮಲ್ಲಿಕಾರ್ಜುನ್ ಮುತ್ತಲಗೇರಿ ನಿರ್ದೇಶನದ ‘ರಂಗ್‍ಬಿರಂಗಿ’ ಸಿನಿಮಾದ ನವಕಲಾವಿದರನ್ನು ಒಳಗೊಂಡಿದ್ದು,  ಚಿತ್ರದ ಟ್ರೇಲರ್ ಮತ್ತು ಹಾಡುಗಳಿಂದ ‘ರಂಗ್‍ಬಿರಂಗಿ’ ಭರವಸೆಯನ್ನು ಮೂಡಿಸಿದೆ. ನಟಿ ತನ್ವಿ ರಾವ್ ನಟರಾದ ಶ್ರೀಜಿತ್, ಪಂಚು, ಚರಣ್ ಮತ್ತು ಶ್ರೇಯಸ್ ನಾಲ್ವರು ಲೀಡ್ ರೋಲ್‍ನಲ್ಲಿ ನಟಿಸಿದ್ದಾರೆ. ವಿಭಿನ್ನ ಪ್ರೇಮಕಥೆಯನ್ನು ರಂಗ್‍ಬಿರಂಗಿ ಒಳಗೊಂಡಿದೆ.  ಯುವ ಮನಸ್ಸುಗಳ ಹೃದಯ ಬಡಿತವನ್ನು ರಂಗ್‍ಬಿರಂಗಿ ಕಥೆಯ ತಿರುಳು. ಕಾಲೇಜ್ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ನಡುವಿನ ಸ್ನೇಹ, ಎಳೆ ಪ್ರೀತಿ ಎಲ್ಲವನ್ನು ಚಿತ್ರ ಒಳಗೊಂಡಿದೆ. ಇದೂವರೆಗೂ ಕಾಣದ ಸುಂದರ ಪ್ರೇಮ ಕಥೆಯನ್ನು ನೀವು ರಂಗ್‍ಬಿರಂಗಿಯಲ್ಲಿದೆ. ( ವರದಿ : ಪಿ.ಎಸ್ )

Leave a Reply

comments

Related Articles

error: