ಸುದ್ದಿ ಸಂಕ್ಷಿಪ್ತ

ಫೆಬ್ರವರಿ 23 ರಿಂದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ

ಮೈಸೂರು ಫೆ.23:- ಜಿಲ್ಲಾಡಳಿತ, ಮೈಸೂರು ಜಿಲ್ಲೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಸ್ಪೃಶ್ಯತಾ ನಿರ್ಮೂಲನಾ ಸಪ್ತಾಹದ ಅಂಗವಾಗಿ ಅಸ್ಪೃಶ್ಯತೆಯ ನಿರ್ಮೂಲನೆ: ಸಾಮೂಹಿಕ ಜವಾಬ್ದಾರಿಗಳು ಎರಡು ದಿನಗಳ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಫೆಬ್ರವರಿ 23 ಹಾಗೂ 24 ರಂದು ಬೆಳಿಗ್ಗೆ 10-30 ಗಂಟೆಗೆ ಕಲಾಮಂದಿರದಲ್ಲಿ ನಡೆಯಲಿದೆ.
ಫೆಬ್ರವರಿ 23 ರಂದು ಮಧ್ಯಾಹ್ನ 12 ಗಂಟೆಗೆ ಗೋಷ್ಠಿ -1ರಲ್ಲಿ ಅಸ್ಪೃಶ್ಯತೆ ಉಗಮ ಮತ್ತು ಕಾರಣಗಳು  ಬಗ್ಗೆ ಬೆಂಗಳೂರಿನ ಕರ್ನಾಟಕ ಜನಶಕ್ತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಗೌರಿ ಅವರು ವಿಷಯ ಮಂಡಿಸಲಿದ್ದಾರೆ.
ಅಂದು ಮಧ್ಯಾಹ್ನ 1-30 ಗಂಟೆಗೆ ಗೋಷ್ಠಿ -1ರಲ್ಲಿ ಅಸ್ಪೃಶ್ಯತೆ ನಿವಾರಣೆಗೆ  ದಲಿತೇತರರ ಕೊಡುಗೆಗಳ ಬಗ್ಗೆ ಮೈಸೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್. ನರೇಂದ್ರ ಕುಮಾರ್ ಅವರು ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 2-30 ಗಂಟೆಗೆ ಅಸ್ಪೃಶ್ಯತೆಯ ವಿರುದ್ಧದ ದಲಿತರ ಹೋರಾಟ ಪರಂಪರೆ ಬಗ್ಗೆ ಮೈಸೂರಿನ ಡಾ. ಬಾಬು ಜಗಜೀವನ್‍ರಾಂ ಅಧ್ಯಯನ, ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕರಾದ ಪ್ರೊ. ಕೆ. ಸದಾಶಿವ ಅವರು ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 3-30 ಗಂಟೆಗೆ ಮಧ್ಯಯುಗೀಯ ಭಾರತದಲ್ಲಿ ಅಸ್ಪೃಶ್ಯತೆ: ಕರಾಳ ಸ್ವರೂಪಗಳ ಬಗ್ಗೆ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಉಪನ್ಯಾಸಕರಾದ ಡಾ. ಹೆಚ್.ಎಲ್. ಶೈಲಾ ಅವರು ವಿಷಯ ಮಂಡಿಸಲಿದ್ದಾರೆ.
ಫೆಬ್ರವರಿ 24 ರಂದು ಬೆಳಿಗ್ಗೆ 10-30 ಗಂಟೆಗೆ ಗೋಷ್ಠಿ-3ರಲ್ಲಿ ಪ್ರಾಚೀನ ಭಾರತದಲ್ಲಿ ಅಸ್ಪøಶ್ಯತೆ :ಕರಾಳ ಸ್ವರೂಪಗಳ ಬಗ್ಗೆ  ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಬಿ.ಎಂ. ಪುಟ್ಟಯ್ಯ ಅವರು ವಿಷಯ ಮಂಡಿಸಲಿದ್ದಾರೆ. ಬೆಳಿಗ್ಗೆ 11-30 ಗಂಟೆಗೆ ಅಸ್ಪøಶ್ಯತಾ ನಿರ್ಮೂಲನೆ ಸಂವಿಧಾನಾತ್ಮಕ ಚರ್ಚೆಗಳ ಬಗ್ಗೆ ಮೈಸೂರಿನ ಯುವರಾಜ ಕಾಲೇಜಿನ ಉಪನ್ಯಾಸಕರಾದ ಡಾ. ಡಿ.ಜಿ. ಶಶಿಕುಮಾರ್ ಅವರು ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 12-30 ಗಂಟೆಗೆ ಆತ್ಮಕಥೆಗಳಲ್ಲಿ ಪ್ರತಿಬಿಂಬಿತವಾದ ಅಸ್ಪೃಶ್ಯತೆಯ ಸ್ವರೂಪಗಳ ಬಗ್ಗೆ ಗುಲ್ಬರ್ಗದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಪ್ಪಗೆರೆ ಸೋಮಶೇಖರ್ ಅವರು ವಿಷಯ ಮಂಡಿಸಲಿದ್ದಾರೆ.
ಗೋಷ್ಠಿ-4ರಲ್ಲಿ ಮಧ್ಯಾಹ್ನ 2 ಗಂಟೆಗೆ ಅಸ್ಪೃಶ್ಯತೆಯ ನವ ಸ್ವರೂಪಗಳ ಬಗ್ಗೆ ಬೆಂಗಳೂರಿನ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸಿ.ಜಿ. ಲಕ್ಷ್ಮೀಪತಿ ಅವರು ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅಸ್ಪೃಶ್ಯತಾ ನಿರ್ಮೂಲನೆ : ಕಾನೂನಾತ್ಮಕ ಮಾರ್ಗೋಪಾಯಗಳ ಬಗ್ಗೆ ಬೆಂಗಳೂರಿನ ಕಾನೂನು ವಿಶ್ವವಿದ್ಯಾನಿಲಯದ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕೆ.ಎಲ್.ಚಂದ್ರಶೇಖರ್‍ಐಜೂರು ಅವರು ವಿಷಯ ಮಂಡಿಸಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: