ಸುದ್ದಿ ಸಂಕ್ಷಿಪ್ತ

ಫೆಬ್ರವರಿ 23 : ದಂತ ತಪಾಸಣಾ ಕಾರ್ಯಕ್ರಮ

ಮೈಸೂರು ಫೆ.23:- ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ದಂತ ತಪಾಸಣಾ ಕಾರ್ಯಕ್ರಮ ಫೆಬ್ರವರಿ 23 ರಂದು ಬೆಳಿಗ್ಗೆ 10 ಗಂಟೆಗೆ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ನಡೆಯಲಿದೆ.

ಜೆ.ಎಸ್.ಎಸ್. ದಂತ ಮತ್ತು ವೈದ್ಯಕೀಯ ಕಾಲೇಜಿನ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಹಿರಿಯ ದಂತ ವೈದ್ಯರಾದ ಡಾ. ಸುನೀತ ಅವರು ಕಾರ್ಯಕ್ರಮ ಉದ್ಘಾಟಿಸುವರು. ಪ್ರಾಂಶುಪಾಲರಾದ ಡಾ. ಚನ್ನಬಸವೇಗೌಡ ಎಂ. ಅವರು ಅಧ್ಯಕ್ಷತೆ ವಹಿಸುವರು.

ಮನೋವಿಜ್ಞಾನ ವಿಭಾಗದ ಪ್ರೊ. ಮನೋನ್ಮಣಿ ಎಂ.ಎಸ್., ಭೂಗೋಳಶಾಸ್ತ್ರ ವಿಭಾಗದ ಡಾ. ಚಂದ್ರಕುಮಾರ್, ಕನ್ನಡ ವಿಭಾಗದ ಡಾ. ಜಗದೀಶ ಟಿ.ಎಲ್. ಅವರುಗಳು ಉಪಸ್ಥಿತರಿರುವರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: