
ಸುದ್ದಿ ಸಂಕ್ಷಿಪ್ತ
ಪಡಿತರ ಚೀಟಿ ವಿತರಣಾ ಕಾರ್ಯಕ್ರಮ
ಮೈಸೂರು ಫೆ.23:- ಸಾರ್ವಜನಿಕರು ಪಡಿತರ ಚೀಟಿ ಕೋರಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಸ್ಥಳದಲ್ಲಿಯೇ ಪಡಿತರ ಚೀಟಿ ನೀಡುವ ಉದ್ದೇಶದಿಂದ “ ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮ” ವನ್ನು ಫೆಬ್ರವರಿ 23 ರಿಂದ ಮಾರ್ಚ್ 11ರ ವರಗೆ (ರಜಾದಿನಗಳನ್ನು ಹೊರತು ಪಡಿಸಿ) ಮೈಸೂರು ನಗರ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದೆ.
ಅರ್ಜಿದಾರರು ಆನ್ಲೈನ್ ಅರ್ಜಿ ಹಾಕಿರುವ ಪ್ರತಿ, ಆದಾಯ ದೃಢೀಕರಣ ಪತ್ರ (ಕುಟುಂಬ ಮುಖ್ಯಸ್ಥರು/ಸದಸ್ಯರ ಹೆಸರಿನಲ್ಲಿರಬೇಕು, ಆಧಾರ್ನಲ್ಲಿರುವ ವಿಳಾಸ ಇರಬೇಕು.), ಅರ್ಜಿಯಲ್ಲಿರುವ 18 ವರ್ಷ ಮೇಲ್ಪಟ್ಟ ಒಬ್ಬ ಸದಸ್ಯರು ಹಾಜರಾಗುವುದು ಎಂದು ಸಹಾಯಕ ನಿರ್ದೇಶಕರು(ಆಹಾರ) ಅನೌಪಚಾರಿಕ ಪಡಿತರ ಚೀಟಿ ಮೈಸೂರು ನಗರ ಇವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)