ಮೈಸೂರು

ಮನೆಯೊಳಗೆ ನುಗ್ಗಿದ್ದ ಚಿರತೆ ಸೆರೆ

cheeta-3ಬುಧವಾರ ರಾತ್ರಿ ಮೈಸೂರಿನ ಸಮೀಪದ ಗುರಕಾರಪುರದಲ್ಲಿ ಹಸುವಿನ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಹೋಗಿದ್ದ ಚಿರತೆಯೊಂದು ಮನೆಯಲ್ಲಿ ಬಂಧಿಯಾಗಿದೆ. ಚಿರತೆ ನುಸುಳಿದ್ದನ್ನು ಕಂಡು ಗ್ರಾಮಸ್ಥರು ಮನೆಯ ಬಾಗಿಲನ್ನು ಭದ್ರಪಡಿಸಿ ಚಿರತೆಯನ್ನು ಮನೆಯೊಳಗೆ ಕೂಡಿ ಹಾಕಿದ್ದಾರೆ. ಮೇಳಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚಿಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಚಿರತೆ ಕಾಣಿಸಿಕೊಂಡು ನಾಗರಿಕರಲ್ಲಿ ಆತಂಕ ಮೂಡಿಸಿ, ಅರಣ್ಯ ಇಲಾಖೆ ಇಟ್ಟ ಬೋನಿಗೆ ಸೆರೆಯಾಗಿತ್ತು.

 

cheeta-2

Leave a Reply

comments

Related Articles

error: