ಮನರಂಜನೆ

ಮಮ್ಮುಟಿ ಜತೆ ಸಿನಿಮಾ ಮಾಡುತ್ತಿಲ್ಲ: ಕಿಚ್ಚ ಸುದೀಪ್

ಬೆಂಗಳೂರು,ಫೆ.23-ಮಲಯಾಳಂನ ಖ್ಯಾತ ನಟ ಮಮ್ಮುಟಿ, ಸುದೀಪ್ ಅವರನ್ನು ಭೇಟಿಯಾಗಿರುವ ಫೋಟೋ ವೈರಲ್ ಆಗುತ್ತಿದ್ದಂತೆ ಮಮ್ಮುಟಿಯವರೊಂದಿಗೆ ಸುದೀಪ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಇದು ಗಾಸಿಪ್ ಅಷ್ಟೇ. ನನ್ನನ್ನು ಮಮ್ಮುಟಿ ಅವರು ಸಹಜವಾಗಿ ಭೇಟಿಯಾಗಿದ್ದು. ಇದು ಯಾವುದೇ ಪೂರ್ವನಿಯೋಜಿತ ಭೇಟಿ ಅಲ್ಲ. ಅಲ್ಲದೆ ನಾನು ಅವರ ಜೊತೆಗೆ ಯಾವುದೇ ಸಿನಿಮಾವನ್ನು ಮಾಡುತ್ತಿಲ್ಲ ಎಂದು ಸುದೀಪ್ ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಕನ್ನಡದ ‘ದಿ ವಿಲನ್’ ಸಿನಿಮಾ ಮಲೆಯಾಳಂ ನಲ್ಲಿ ರಿಮೇಕ್ ಆಗಲಿದ್ದು, ಮಲೆಯಾಳಂ ನಲ್ಲಿಯೂ ನಟ ಸುದೀಪ್ ಅವರೇ ತಮ್ಮ ಪಾತ್ರವನ್ನು ಮಾಡಲಿದ್ದಾರೆ. ಶಿವಣ್ಣನ ಪಾತ್ರದಲ್ಲಿ ನಟ ಮೋಹನ್ ಲಾಲ್ ನಟಿಸುತ್ತಾರೆ ಎಂಬುದಕ್ಕೆ, ಸುದೀಪ್ ಅವರ ಹಾಲಿವುಡ್ ನ ರೈಸನ್ ಚಿತ್ರ ಯಾವಾಗ ಶುರುವಾಗುತ್ತದೆ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ.

ಈ ಚಿತ್ರಗಳ ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ಅವರ 151ನೇ ಸಿನಿಮಾ ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಹಾಗೂ ಧನುಷ್ ನಿರ್ದೇಶನದ ಒಂದು ಸಿನಿಮಾದಲ್ಲಿ ಸುದೀಪ್ ಅಭಿನಯಿಸುತ್ತಾರೆ ಎನ್ನುವ ಮಾತಿದೆ.

ಸುದೀಪ್ ಸದ್ಯ ‘ದಿ ವಿಲನ್’, ‘ಪೈಲ್ವಾನ್’, ‘ಕೋಟಿಗೊಬ್ಬ 3’, ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: