ಮೈಸೂರು

ಹರೀಶ್ ಗೌಡ ಬೆಂಬಲಿಸಿ ದಲಿತರ ಬೃಹತ್ ಸಮಾವೇಶ .ಫೆ.25

 ಮೈಸೂರು,ಫೆ.23 : ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಚಾಮರಾಜ ವಿದಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ.ಹರೀಶ್ ಗೌಡ ಅವರನ್ನು ಬೆಂಬಲಿಸಿ ‘ದಲಿತರ ಬೃಹತ್ ಸಮಾವೇಶವನ್ನು’ ಫೆ.25ರ ಮಧ್ಯಾಹ್ನ 12.30ಕ್ಕೆ ಜೆ.ಕೆ.ಮೈದಾನದಲ್ಲಿ ಆಯೋಜಿಸಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ದಲಿತ ಬಹುಜನ ಚುಳುವಳಿಯ ಜಿಲ್ಲಾಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿ ಅಭಿವೃದ್ಧಿ ಚಿಂತಕ ಹರೀಶ್ ಗೌಡ ಬೆಂಬಲಿಸಿ ನಡೆಸುತ್ತಿರುವ ಸಮಾವೇಶದಲ್ಲಿ ಉರಿಲಿಂಗ ಪೆದ್ದಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ, ಚಿತ್ರದುರ್ಗದ ಮಹಾಶರಣ ಹರಳಯ್ಯ ಗುರುಪೀಠದ ಶ್ರೀಬಸವ ಹರಳಯ್ಯ ಸ್ವಾಮೀಜಿ, ಸಾನಿಧ್ಯವಹಿಸಲಿದ್ದು, ಪ್ರಗತಿಪರ ಹೋರಾಟಗಾರರು, ವಿವಿಧ ದಲಿತಪರ ಸಂಘಟನೆಯ ಮುಖಂಡರು, ಮಹಿಳಾ ಸಂಘಟನೆಗಳು ಸೇರಿದಂತೆ 2 ಸಾವಿರ ಜನ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ನಮ್ಮ ಆಯ್ಕೆ ಅಭಿಯಾನಕ್ಕೂ ಚಾಲನೆ ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆ.ಶಿವಶಶಂಕರ್, ಕಾರ್ಯದರ್ಶಿ ಎನ್.ಕೃಷ್ಣ, ಭಾಸ್ಕರ್, ಕೆ.ವಿ.ರವಿಕುಮಾರ್, ಶರತ್ ಕುಮಾರ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: