ಮೈಸೂರು

ತಂತ್ರಜ್ಞಾನ ಅಭಿವೃದ್ಧಿಯಿಂದ ಸಮರ್ಥ ವಾಕ್, ಶ್ರವಣೋಪಕರಣಗಳ ಬಳಕೆ ಸಾಧ್ಯವಾಗಿದೆ: ಡಾ. ಸಾವಿತ್ರಿ

ಜೆಎಸ್‍ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ “ಅಕ್ಯೂಸ್ಟಿಕ್ ಅಂಡ್‍ ಪರ್ಸೆಚ್ಯುಯಲ್ ಅನಾಲಿಸಿಸ್ ಆಫ್ ವಾಯ್ಸ್ ಅಂಡ್ ಸ್ಪೀಚ್” ವಿಷಯವಾಗಿ ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿದ್ದು,  ಆಸ್ಪತ್ರೆ ಆವರಣದಲ್ಲಿರುವ ರಾಜೇಂದ್ರ ಭವನದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ನ.24ರಿಂದ 27ರವರೆಗೆ ನಡೆಯಲಿರುವ ಕಾರ್ಯಾಗಾರವನ್ನು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ.ಸಾವಿತ್ರಿ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನದಲ್ಲಾಗಿರುವ ಮಹತ್ತರ ಪ್ರಗತಿಯಿಂದ ಪ್ರಸ್ತುತ ಹಲವು ವಾಕ್ ಮತ್ತು ಶ್ರವಣೋಪಕರಣಗಳು ಲಭ್ಯವಿದ್ದು ಸಮಸ್ಯೆಯನ್ನು ಸುಲಭವಾಗಿ ಪತ್ತೆ ಹಚ್ಚಿ ಪರಿಹಾರ ನೀಡಬಹುದಾಗಿದೆ. ಓಸಿಲೋಗ್ರಾಫ್ನ ತರಂಗಾಂತರದ ಮೂಲಕ ಶಬ್ದವನ್ನು ಗುರುತಿಸುವುದು ಸುಲಭ. ಅದರಂತೆ ಮಗುವಿನ ಶಬ್ದ ಉಚ್ಛಾರಣೆ, ಅಂಗಸನ್ನೆ ಹಾಗೂ ತುಟಿ ಚಲನೆಯಿಂದಲೂ ಭಾವನೆಗಳನ್ನು ತಿಳಿಯಬಹುದು. ಕಂಪ್ಯೂಟರ್‍ ಡಿಜಿಟಲ್ ಸಿಗ್ನಲ್‍ನಿಂದ ಕ್ರಾಂತಿಕಾರಿ ಪ್ರಗತಿಯಾಗಿದ್ದು ಎಲ್ಲ ಸನ್ನೆಗಳು ಸಂಖ್ಯೆಗಳಾಗಿ ಪರಿರ್ವತನೆಯಾಗುವುದು. ಇದರಿಂದ ಮಗುವಿನ ಧ್ವನಿಯ ಸ್ಪಷ್ಟತೆ, ಕೂಗುಗಳನ್ನು ಗುರುತಿಸಬಹುದು. ಕಂಪ್ಯೂಟರ್‍ ಸಹಾಯದಿಂದ ಮಗುವಿನ ಅಥವಾ ವ್ಯಕ್ತಿಯ ನ್ಯೂನತೆಯನ್ನು ತೀಕ್ಷ್ಣವಾಗಿ ಹಾಗೂ ಸ್ಪಷ್ಟವಾಗಿ ಗೋಚರಿಸಲಿದ್ದು ತರಬೇತಿಯನ್ನು ಅವಶ್ಯತೆಗೆ ಅನುಸಾರವಾಗಿ ನೀಡಲು ಅನುಕೂಲವಾಗುವುದು. ವಾಕ್ ಮತ್ತು ಶ್ರವಣಕ್ಕೆ ಸಂಬಂಧಿಸಿದಂತೆ ಸುಮಾರು ಐನೂರಕ್ಕೂ ಹೆಚ್ಚು ಆ್ಯಪ್‍ಗಳು ಅಂತರ್‍ ಜಾಲದಲ್ಲಿ ಲಭ್ಯವಿದ್ದು ಬಹುಪಯೋಗಿಯಾಗಿದೆ. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಧ್ಯಯನ ನಡೆಸಬೇಕು ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಡಾ.ಎನ್.ರತ್ನಾ ಪಾಲ್ಗೊಂಡಿದ್ದರು. ಜೆಎಸ್‍ಎಸ್‍ ಸಂಸ್ಥೆಯ ವಾಕ್‍ ಮತ್ತು ಶ್ರವಣ ವಿಭಾಗದ ನಿರ್ದೇಶಕ ಡಾ.ಎನ್.ಪಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.

ವಾಕ್ ಮತ್ತು ಶ್ರವಣಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನದಲಾಗಿರುವ ಬದಲಾವಣೆ ಹಾಗೂ ಉಪಕರಣದ ಉಪಯೋಗವನ್ನು ಪ್ರಯೋಗಾತ್ಮಕವಾಗಿ ಕಾರ್ಯಗಾರದಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ನೆರೆ ರಾಜ್ಯ ಕೇರಳದ ಸುಮಾರು 60 ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ವಿಪಿನ್ ಗೋಶ್ ಸ್ವಾಗತಿಸಿದರು, ನಯನ ಮತ್ತು ಪೂಜಾ ಪ್ರಾರ್ಥಿಸಿದರು. ಇಂದು ನಿರೂಪಿಸಿದರು, ಇಂದಿರಾ ವಂದಿಸಿದರು.

Leave a Reply

comments

Related Articles

error: