ಕರ್ನಾಟಕಮೈಸೂರು

ಮಹಿಳಾ ಸಬಲೀಕರಣ ಕುರಿತ ಉಪನ್ಯಾಸ ಕಾರ್ಯಕ್ರಮ

ಅನುಭವ ಮತ್ತು ಜ್ಞಾನದಿಂದ ಮಾತ್ರ ಮಹಿಳೆಯರು ರಾಜಕೀಯದಲ್ಲಿ ಮೇಲುಗೈ ಸಾಧಿಸಲು ಸಾಧ್ಯ. ಶಿಕ್ಷಣ ಮತ್ತು ಕೆಲಸ ಮಹಿಳೆಯ ಎರಡು ಕಣ್ಣುಗಳಿದ್ದಂತೆ. ಶಿಕ್ಷಣ ಮತ್ತು ಕೆಲಸವಿದ್ದಾಗ ಮಾತ್ರ ಆಕೆ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯಾಧ್ಯಕ್ಷೆ ಮತ್ತು ಗ್ರಾಮಪಂಚಾಯತ್ ಉಪಾಧ್ಯಕ್ಷೆ ಎಂ.ಎಸ್. ಮಂಜುಳಾ ಹೇಳಿದ್ದಾರೆ.

ಮೈಸೂರಿನ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ರಾಜಕೀಯದಲ್ಲಿ ಮಹಿಳೆಯರ ಪಾತ್ರ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣವು ಮಹಿಳೆಯರಲ್ಲಿ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹೆಣ್ಣಿನ ವಿಚಾರದಲ್ಲಿ ಅವೈಜ್ಞಾನಿಕ ಧೋರಣೆಗಳನ್ನು ಬಿಡಬೇಕು. ಶಿಕ್ಷಣ ಮಾತ್ರದಿಂದಲೇ ಆಕೆ ವಾದ, ಚರ್ಚೆಗಳನ್ನು ನಡೆಸಿ ಸಮಾನತೆಯನ್ನು ಸಾಧಿಸಬಲ್ಲಳು ಎಂದರು.

ಪ್ರಾಂಶುಪಾಲ ಎನ್.ಜಿ. ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಸಂಯೋಜಕ ಪ್ರೊ.ಎಸ್. ಸತ್ಯನಾರಾಯಣ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎ. ಶ್ವೇತಾಶ್ರೀ ಮತ್ತಿತರರು ಉಪಸ್ಥಿತರಿದ್ದರು.6th-lead-1-dsc_0022

Leave a Reply

comments

Related Articles

error: