ಮೈಸೂರು

ವಿವಿಗಳಲ್ಲಿ ಅನುಭವಿ ಉಪನ್ಯಾಸಕರ ಅವಶ್ಯಕತೆಯಿದೆ: ಪ್ರೊ.ಕೆ.ಎಸ್. ರಂಗಪ್ಪ

ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಅನುಭವಿ ಉಪನ್ಯಾಸಕರ ಅಗತ್ಯವಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರು ಹೇಳಿದರು.

ಗುರುವಾರದಂದು ಮಾನಸಗಂಗೋತ್ರಿಯ ಆರ್ಯಭಟ ಸಭಾಂಗಣದಲ್ಲಿ ಓರಿಯಂಟಲ್ ರೀಸರ್ಚ್ ಇನ್ಸ್‍ಟಿಟ್ಯೂಟ್ ವತಿಯಿಂದ ಆಯೋಜಿಸಲಾದ ಸಂಸ್ಕೃತಿ ಸಾಹಿತ್ಯಕ್ಕೆ ಕರ್ನಾಟಕದ ಕೊಡುಗೆ ಕುರಿತು ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ನಾತಕೋತ್ತರ ಪದವಿ ಮುಗಿಸಿ ಹೊರಹೋಗುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಬೋಧನಾ ವೃತ್ತಿಯನ್ನು ಆರಿಸಿಕೊಳ್ಳುತ್ತಾರೆ. ಆದರೆ, ಅವರಿಗೆ ಬೋಧನೆಗೆ ಅನುಭವದ ಕೊರತೆ ಮತ್ತು ಜ್ಞಾನದ ಅಭಾವ ಕಾಡುತ್ತದೆ. ವಿಶ್ವವಿದ್ಯಾನಿಲಯಗಳಲ್ಲಿ ಅನುಭವೀ ಉಪನ್ಯಾಸಕರ ಕೊರತೆಯಿದೆ ಎಂದರು.

ಓರಿಯಂಟಲ್ ರೀಸರ್ಚ್ ಇನ್ಸ್‍ಟಿಟ್ಯೂಟ್(ಓಆರ್‍ಐ) ಯಶಸ್ವಿಯಾಗಿ 125 ವರ್ಷಗಳನ್ನು ಪೂರೈಸಿದ್ದು, ಪ್ರಮುಖ ಹಸ್ತಪ್ರತಿಗಳನ್ನು ಸಂಗ್ರಹಿಸಿದೆ. ಸಂಸ್ಥೆಯು ಸಂಶೋಧಕರಿಗೆ ವಿಚಾರಾನುಸಾರವಾಗಿ ಸಂಶೋಧನೆಗೆ ಸಹಾಯ ಮಾಡುತ್ತಾ ಬಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಓಆರ್‍ಐ ನಿರ್ದೆಶಕರಾದ ಡಾ.ಎಚ್‍.ಪಿ. ದೇವಕಿ ಅವರು ಸಿಬ್ಬಮದಿಯ ವೇತನ ಹೆಚ್ಚಿಸುವಂತೆ ಕುಲಪತಿ ಪ್ರೊ. ರಂಗಪ್ಪ ಅವರ ಬಳಿ ಮನವಿ ಮಾಡಿಕೊಂಡರು.

ಮೈಸೂರು ವಿವಿ ರಿಜಿಸ್ಟ್ರಾರ್ ಪ್ರೊ. ಆರ್. ರಾಜಣ್ಣ, ಓಆರ್‍ಐ ಸಲಹೆಗಾರ ಡಾ.ಟಿ.ವಿ. ಸತ್ಯನಾರಾಯಣ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: