ಕ್ರೀಡೆದೇಶ

ಟಿ20 ಮುಂಬೈ ಲೀಗ್ ಉತ್ತಮ ವೇದಿಕೆ: ತೆಂಡೂಲ್ಕರ್

ಮುಂಬೈ,ಫೆ.23-ಮುಂಬರುವ ಟಿ 20 ಮುಂಬೈ ಲೀಗ್ ಯುವ ಕ್ರಿಕೆಟಿಗರ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಲಿದೆ ಎಂದು ಕ್ರಿಕೆಟ್ ದಿಗ್ಗಜ ಹಾಗೂ ಟೂರ್ನಿಯ ಅಂಬಾಸಿಡರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಮುಂಬೈ ಕ್ರಿಕೆಟ್ ಗೆ ಇಂತಹದ್ದೊಂದು ಟೂರ್ನಿಯ ಅವಶ್ಯಕತೆಯಿತ್ತು. ಭಾರತ ತಂಡದಲ್ಲೂ ಮುಂಬೈ ಕ್ರಿಕೆಟಿಗರು ಪ್ರಾಬಲ್ಯ ಮೆರೆದಿದ್ದಾರೆ. ಇದಕ್ಕೆ ಸಾಕಷ್ಟು ಅಂಕಿ-ಸಂಖ್ಯೆಗಳೇ ಸಾಕ್ಷಿ. ಈ ಲೀಗ್ ನ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದಿದ್ದಾರೆ.

ಮಾರ್ಚ್ 11 ರಿಂದ 21 ರವರೆಗೆ ವಾಂಖೆಡೆ ಮೈದಾನದಲ್ಲಿ ಟಿ 20 ಮುಂಬೈ ಲೀಗ್ ನಡೆಯಲಿದೆ. (ವರದಿ-ಎಂ.ಎನ್)

Leave a Reply

comments

Related Articles

error: