
ಮೈಸೂರು
ಮೇಯರ್ ಭಾಗ್ಯವತಿ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಕಾಂಗ್ರೆಸ್
ಮೈಸೂರು,ಫೆ.23:- ಮೇಯರ್ ಭಾಗ್ಯವತಿ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಜೆಡಿಎಸ್- ಬಿಜೆಪಿ ಮೈತ್ರಿ ಬೆಂಬಲ ಪಡೆದು ಮೇಯರ್ ಆಗಿರುವ ಭಾಗ್ಯವತಿ ವಿರುದ್ಧ ಶಿಸ್ತು ಕ್ರಮಕ್ಕೆ ಕೆಪಿಸಿಸಿ ಸೂಚನೆ ನೀಡಿದ್ದು, ಭಾಗ್ಯವತಿಯವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ನಿರ್ಧಾರಿಸಿದೆ ಎನ್ನಲಾಗಿದೆ. ಮೈಸೂರಿನ 23 ನೇ ವಾರ್ಡಿನ ಕಾಂಗ್ರೆಸ್ ಪಾಲಿಕೆ ಸದಸ್ಯೆಯಾಗಿರುವ ಭಾಗ್ಯವತಿ ಪಕ್ಷವಿರೋಧಿ ಚಟುವಟಿಕೆ ಭಾಗಿಯಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಫೆ. 27 ರಂದು ಪಾಲಿಕೆಯ ಕೌನ್ಸಿಲ್ ಸಭೆ ಹಿನ್ನಲೆಯಲ್ಲಿ ಕೌನ್ಸಿಲ್ ಗೂ ಮುನ್ನ ಪಕ್ಷದಿಂದ ಉಚ್ಛಾಟಿಸಿ ಸಭೆಯಲ್ಲಿ ಮೇಯರ್ ಇಕ್ಕಟ್ಟಿಗೆ ಸಿಲುಕಿಸಲು ಪ್ಲಾನ್ ನಡೆಸಿದೆ. ಕೈ ಪಾರ್ಟಿ ತೊರೆದು ಮೇಯರ್ ಆದ ಭಾಗ್ಯವತಿ ಅವರ ವಿರುದ್ಧ ಶಿಸ್ತು ಕ್ರಮದ ತೂಗುಗತ್ತಿ ಇದ್ದು, ಶಿಸ್ತು ಕ್ರಮ ಕೈಗೊಂಡು ಮೇಯರ್ ಸ್ಥಾನ ಕಳೆದುಕೊಂಡರೆ ಮೈಸೂರು ಮಹಾನಗರ ಪಾಲಿಕೆಯಲ್ಲಿಯೇ ಇತಿಹಾಸ ಸೃಷ್ಟಿಯಾಗಲಿದೆ. (ಕೆ.ಎಸ್,ಎಸ್.ಎಚ್)