ಕರ್ನಾಟಕ

ಮೌಢ್ಯಾಚಾರಣೆ ಮಾಡಿದ ಚಾ.ನಗರ ತಹಸಿಲ್ದಾರ್.!

ಚಾಮರಾಜನಗರ,ಫೆ.23-ಮೌಢ್ಯತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ಅಧಿಕಾರಿಯೇ ಮೌಢ್ಯಾಚಾರಣೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನಲ್ಲಿ ನಡೆದಿದೆ.

ಚಾಮರಾಜನಗರ ತಹಸಿಲ್ದಾರ್ ಪುರಂದರ ಮೌಢ್ಯಾಚಾರಣೆ ಮಾಡಿದ್ದಾರೆ. ಪುರಂದರ ಅವರು ತಹಸಿಲ್ದಾರ್ ಕಚೇರಿಯ ಆವರನದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಹೋಮಹವನ ಮಾಡಿಸಿದ್ದಾರೆ. ತಹಸಿಲ್ದಾರ್ ದೇವಾಲಯದ ಮೂರ್ತಿ ಭಗ್ನವಾಗಿದ್ದು, ಒಳ್ಳೆಯದಾಗಲಿ ಎಂದು ಹೋಮಹವನ ಮಾಡಿಸುತ್ತಿದ್ದೇನೆ ಎಂದರೆ ಸಾರ್ವಜನಿಕರು ವರ್ಗಾವಣೆಯಾಗದಂತೆ ಹೋಮಹವನ ಮಾಡಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ವರ್ಗಾವಣೆಗೋಸ್ಕರ ಹೋಮಹವನ ಮಾಡಿಸುತ್ತಿಲ್ಲವೆಂದ ಮೇಲೆ ಹೋಮಹವನವನ್ನು ಗೌಪ್ಯವಾಗಿ ಮಾಡುವುದಾದರೂ ಏನಿತ್ತು ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. (ವರದಿ-ಆರ್.ವಿ.ಎಸ್, ಎಂ.ಎನ್)

Leave a Reply

comments

Related Articles

error: