ಮನರಂಜನೆ

ದರ್ಶನ್ 49ನೇ ಚಿತ್ರಕ್ಕೆ ಇಬ್ಬರು ನಾಯಕಿಯರು

ಕಳೆದ ವಾರವಷ್ಟೆ ಛಾಲೆಂಜಿಂಗ್ ಸ್ಟಾರ್‍ ದರ್ಶನ್‍ ರವರ 49ನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಆದರೆ ಚಿತ್ರದ ನಾಯಕನಟಿಯ ಹೆಸರು ಬಹಿರಂಗವಾಗಿರಲಿಲ್ಲ. ಹೀಗಾಗಿ ನಾಯಕನಟಿ ಯಾರಾಗಬಹುದೆಂಬ ನಿರೀಕ್ಷೆ ಎಲ್ಲರಲ್ಲೂ ಮೂಡಿತ್ತು. ಇದಕ್ಕೆ ಉತ್ತರವೆಂಬಂತೆ ಲೂಸಿಯಾ ಖ್ಯಾತಿಯ ಶೃತಿ ಹರಿಹರನ್ ಹಾಗೂ ಕಿರಿಕ್‍ಪಾರ್ಟಿ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿರುವ ಕೊಡಗಿನ ರಶ್ಮಿಕ ಮುದ್ದಣ್ಣ ನಾಯಕಿಯರಾಗಿ ನಟಿಸಲಿದ್ದಾರೆ ಎಂದು ಚಿತ್ರರಂಗದ  ಮೂಲಗಳು ತಿಳಿಸಿವೆ.

‘ಮಿಲನ’ ಪ್ರಕಾಶ್ ಅವರು ಆ್ಯಕ್ಷನ್‍-ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಡಿಸೆಂಬರ್ 9 ರಂದು ಮುಹೂರ್ತ ಫಿಕ್ಸ್ ಆಗಿದ್ದು, ಚಿತ್ರಕ್ಕೆ ಇಬ್ಬರು ನಾಯಕನಟಿಯರೆಂಬ ಸುದ್ದಿ ದರ್ಶನ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಶೃತಿ ಹರಿಹರನ್
ಶೃತಿ ಹರಿಹರನ್

Leave a Reply

comments

Related Articles

error: