ಮನರಂಜನೆ

ತಮಿಳಿನಲ್ಲಿ ರಿಮೇಕ್ ಆಗಲಿರುವ ಕನ್ನಡದ ‘ಮಮ್ಮಿ ಸೇವ್‍ ಮಿ’

ಸ್ಯಾಂಡಲ್‍ವುಡ್‍ನಲ್ಲಿ ರಿಮೇಕ್‍ ಚಿತ್ರಗಳದ್ದೇ ಹಾವಳಿ ಎಂದು ಬೊಬ್ಬೆ ಹೊಡೆಯುತ್ತಿದ್ದ ಮಂದಿಗೆ ಉತ್ತರವೆಂಬಂತೆ ಕನ್ನಡದ ಸಾಲು ಸಾಲು ಸಿನಿಮಾಗಳು ತಮಿಳಿಗೆ ಅಥವಾ ತೆಲುಗಿಗೆ ರಿಮೇಕ್ ಆಗುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಕನ್ನಡದ ‘ಮಮ್ಮಿ ಸೇವ್‍ ಮಿ’ ಚಿತ್ರ.

ಕನ್ನಡದ ಸೂಪರ್‍ ಸ್ಟಾರ್‍ ಉಪೇಂದ್ರ ರವರ ಪತ್ನಿ ಪ್ರಿಯಾಂಕ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ. ಈಗ ತಮಿಳಿಗೆ ರಿಮೇಕ್ ಆಗುವ ಎಲ್ಲ ಲಕ್ಷಣಗಳು ಕಂಡುಬಂದಿವೆ. ಟ್ರೈಲರ್ ಬಿಡುಗಡೆಯಿಂದಲೇ ಸದ್ದು ಮಾಡಿದ್ದ ಈ ಚಿತ್ರ ಡಿಸೆಂಬರ್ 2 ರಂದು ರಿಲೀಸ್‍ಗೆ ಸಿದ್ಧವಾಗಿದೆ. ಇದೀಗ ಚಿತ್ರಕ್ಕೆ ನೆರೆ ರಾಜ್ಯದ ಭಾಷೆಗಳಿಂದ ರಿಮೇಕ್ ಬೇಡಿಕೆ ಬಂದಿರುವುದು ನಿರ್ಮಾಪಕರಿಗೆ ಸಿಹಿಸುದ್ದಿಯಾಗಿದೆ.

ಚಿತ್ರದ ನಿರ್ದೇಶಕ ಲೋಹಿತ್ ಪ್ರಕಾರ ಈ ಚಿತ್ರವನ್ನು ಕಾಲಿವುಡ್‍ನ ಸೂಪರ್‍ ಜೋಡಿ ಎಂದೇ ಕರೆಯಲ್ಪಡುವ ‘ಸೂರ್ಯ-ಜ್ಯೋತಿಕಾ’ ಅವರು ರಿಮೇಕ್ ಮಾಡಲು ಇಚ್ಛಿಸಿದ್ದು, ಮಾತುಕತೆಯ ಹಂತದಲ್ಲಿದೆ. ಎಲ್ಲ ಕೂಡಿ ಬಂದರೆ, ಜ್ಯೊತಿಕಾ ಅವರೇ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

surya-jyothika

Leave a Reply

comments

Related Articles

error: