ಮೈಸೂರು

ಜಾರ್ಖಂಡ್ ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಿದ್ದಕ್ಕೆ ಖಂಡನೆ : ಪ್ರತಿಭಟನೆ

ಮೈಸೂರು,ಫೆ.24:- ಜಾರ್ಖಂಡ್ ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಿಸಿದ್ದನ್ನು ಖಂಡಿಸಿ ಮೈಸೂರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶುಕ್ರವಾರ ಮಧ್ಯಾಹ್ನ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ನಿಷೇಧದ ತೀರ್ಮಾನ ಅತ್ಯಂತ ಪೂರ್ವಾಗ್ರಹ ಪೀಡಿತವಾಗಿದೆ. ಇದು ಹಿಂದುತ್ವ ಆಡಳಿತದ ರಾಜಕೀಯ ಕಡುಹಗೆತನದ ಬಹಿರಂಗ ಪ್ರದರ್ಶನವಾಗಿದೆ. ಈ ಸರ್ಕಾರ ರಾಜ್ಯದೊಳಗೆ ಧಮನಿತ ವರ್ಗಗಳ ಹೋರಾಟವನ್ನು ನಿಗ್ರಹಿಸಲು ಕರಾಳ ಕಾನೂನುಗಳನ್ನು ಬಳಸುತ್ತಾ ಬರುತ್ತಿದೆ. ಇದು ಸಂವಿಧಾನಾತ್ಮಕವಾಗಿ ರಕ್ಷಿಸಲಾಗಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಮೀನ್ ಸೇಠ್, ಅಬ್ದುಲ್ ಮಜೀದ್, ಫಾರೂಕ್ ಉರ್ರಹ್ಮಾನ್, ಜಾವೀದ್, ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Leave a Reply

comments

Related Articles

error: