ಸುದ್ದಿ ಸಂಕ್ಷಿಪ್ತ

“ಭೈರವದಿಂದ ಭೈರವಿ” ಸಂಗೀತೋತ್ಸವ ನ.27ರಂದು

ಶ್ರೀಗುರು ಪುಟ್ಟರಾಜ ಸಂಗೀತ ಸಭಾದಿಂದ ಪದ್ಮಭೂಷಣ ಡಾ.ಪಂ.ಪುಟ್ಟರಾಜ ಕವಿ ಗವಾಯಿಯವರ 6ನೇ ಪುಣ್ಯಸ್ಮರಣೆಯಂಗವಾಗಿ “ಭೈರವ ದಿಂದ ಭೈರವಿ” ಸಂಗೀತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನ.27ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ದಿನವಿಡೀ ಕಾರ್ಯಕ್ರಮಗಳು ಜರುಗಲಿವೆ.

ಮಂಗಳೂರು ಗಣೇಶ ಬಿಡಿ ವರ್ಕ್ಸ್ ಮಾಲೀಕ ಡಾ.ಎಂ.ಜಗನ್ನಾಥ ಶಣೈ ಕಾರ್ಯಕ್ರಮ ಉದ್ಘಾಟಿಸುವರು. ಮಾ.ವಿ.ರಾಮಪ್ರಸಾದ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಚ್.ಚನ್ನಪ್ಪ, ಇಂಡಿಯಾ ಅಪರೇಷನ್ಸ್ ಥೇರೋಮ್‍ನ ಅಧ್ಯಕ್ಷ ಭಾಸ್ಕರ್ ಎಸ್.ಕಳಲೆ ಭಾಗವಹಿಸುವರು.

ಬೆಳಗ್ಗೆ ಬೆಂಗಳೂರಿನ ಶಿವಾನಂದ ಸಾಲಿಮಠರಿಂದ ಸಂಗೀತ ಕಾರ್ಯಕ್ರಮ, ತಬಲಾ ತ್ರಯೋ ಧಾರವಾಡದ ಕಲಕೇರಿ ಸಂಗೀತ ವಿದ್ಯಾಲಯದ ಮಕ್ಕಳಿಂದ ಶೃತಿ ರಂಜನಿ ಹಾಗೂ ಬಿಂದುಮಾಲಿನಿ ಕರ್ನಾಟಕ ಸಂಗೀತ. ಶ್ರೀಗುರುಪುಟ್ಟರಾಜ ಬಲಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಮೂಹ ತಬಲಾ ವಾದನ. ಬೆಂಗಳೂರಿನ ಋತು ಬಳಗಾರರಿಂದ ಗಾಯನ ಕಾರ್ಯಕ್ರಮ ನಡೆಯುವುದು.ಮಧ್ಯಾಹ್ನ ಸ್ತುತ್ಯಂತರ ಕಿರುಚಿತ್ರ ಪ್ರದರ್ಶನ, ನಂತರ ಶಿವಮೊಗ್ಗದ ನಾಗಭೂಷಣ ಹೆಗಡೆ ಬಾಳೆಹದ್ದಾ ಗಾಯನ, ರಾಜೇಂದ್ರ ನಾಕೋಡರಿಮ ತಬಲಾ ಸೋಲೋ, ಡಾ.ಚಂದ್ರಿಕಾ ಕಾಮತ್ ಗಾಯನ, ಮೊಹಸಿನ್ ಖಾನ್ ಅವರಿಂದ ಸಿತಾರ ವಾದನ ಹಾಗೂ ಸಂಜೆ 6:30ಕ್ಕೆ ಡಾ.ಅಶೋಕ ಹುಗ್ಗಣ್ಣನವರ್ ಭೈರವಿ ಮಂಗಲ ಸಂಗೀತ ಕಾರ್ಯಕ್ರಮ ನಡೆಯುವುದು.

Leave a Reply

comments

Related Articles

error: