ಮನರಂಜನೆ

ಮಗುವನ್ನು ಎತ್ತು ಮುದ್ದಾಡುತ್ತಿರುವ ಯಶ್ ಪೋಟೊ ವೈರಲ್

ಬೆಂಗಳೂರು,ಫೆ.24: ರಾಕಿಂಗ್ ಸ್ಟಾರ್ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ದಂಪತಿ ಮಗುವನ್ನು ಎತ್ತಿಕೊಂಡು ಆಟವಾಡಿಸುತ್ತಿರೋ ಫೋಟೋವೊಂದನ್ನು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಮೇರಿಕದಲ್ಲಿ ಬ್ಯುಸಿಯಾಗಿರುವ ಈ ದಂಪತಿಗಳು ಬಿಡುವು ಮಾಡಿಕೊಂಡು ಸಾಮಾಜಿಕ ಜಾಲತಾಣಗಳಿ ಪೋಟೋ ಗಳನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ.  ಇತ್ತೀಚೆಗಷ್ಟೇ ರಾಧಿಕಾ ಪಂಡಿತ್   ಪತಿ ಯಶ್ ತನ್ನ ಸಹೋದರನ ಮಗುವನ್ನು ಮಡಿಲಲ್ಲಿ ಹಾಕಿಕೊಂಡು ತೆಗೆಸಿಕೊಂಡಿದ್ದ ಫೋಟೋ ಹಾಕಿದ್ದರು.

ಸದ್ಯ  ರಾಧಿಕಾ ಸಹೋದರ ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದು, ಇತ್ತೀಚೆಗಷ್ಟೇ ಅವರಿಗೆ ಹೆಣ್ಣು ಮಗುವಾಗಿದ್ದು, ರಿಯಾ ಎಂದು ಕಂದಮ್ಮನಿಗೆ ಹೆಸರಿಡಲಾಗಿದೆ. ಮಗುವನ್ನು ಯಶ್ ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೋ ಹಂಚಿಕೊಂಡಿರುವ ರಾಧಿಕಾ, `ಬಹುಶಃ ರಿಯಾಗೆ ಅಂಕಲ್ ಯಶ್ ಅವರ ಗಡ್ಡ ಇಷ್ಟವಾಗಿರಬೇಕು. ಇಲ್ಲಾ ಅದನ್ನು ತೆಗಿ ಅಂತ ಹೇಳುತ್ತಿರಬೇಕು’ ಅಂತ ಫೋಟೋದೊಂದಿಗೆ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ( ವರದಿ: ಪಿ.ಎಸ್ )

Leave a Reply

comments

Related Articles

error: