
ಮೈಸೂರು
ಸಿರಿ ಸಂಭ್ರಮ ನ.27 ರಂದು
ವಿ ಎಲಿಗೆಂಟ್ಸ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಸಹಯೋಗದಲ್ಲಿ ಮೈಸೂರಿನ ಸಿರಿ ವಾಹಿನಿಯಿಂದ “ಸಿರಿ ಸಂಭ್ರಮ” ವನ್ನು ನ.27ರ ಭಾನುವಾರ ಸಂಜೆ 6 ಗಂಟೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸುವರು, ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಹಾಪೌರ ಬಿ.ಎಲ್.ಭೈರಪ್ಪ, ಮಾಜಿ ಸಂಸದ ಅಡಗೂರು ವಿಶ್ವನಾಥ, ಶಾಸಕ ಎಂ.ಕೆ.ಸೋಮಶೇಖರ್. ಜಿಲ್ಲಾಧಿಕಾರಿ ಡಿ.ರಂದೀಪ್, ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯರಾವ್, ಎಸ್ಪಿ ರವಿ ಡಿ. ಚನ್ನಣ್ಣನವರ್, ನಗರಪಾಲಿಕೆ ಆಯುಕ್ತ ಜಗದೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಧ್ರುವಕುಮಾರ್ ಹಾಗೂ ಇತರರು ಉಪಸ್ಥಿತರುವರು.
ಚಲನಚಿತ್ರ ನಟರಾದ ಪ್ರೇಮ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ಚೇತನ್, ಕೃಷ್ಣ, ರಿಷಿ ಹಾಗೂ ನಿರ್ದೇಶಕ ಮಹೇಶ್ ಬಾಬು ಪಾಲ್ಗೊಳ್ಳುವರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಇದೇ ಸಂದರ್ಭದಲ್ಲಿ ಆಲಮೇಲಮ್ಮ ಚಿತ್ರದ ಟೀಸರ್ ಬಿಡುಗಡೆಗೊಳಿಸಲಾಗುವುದು.