ಸುದ್ದಿ ಸಂಕ್ಷಿಪ್ತ
‘ಮಹಮ್ಮದ್ ಪೀರ್’ ವಿಚಾರಗೋಷ್ಠಿ .26.
ಮೈಸೂರು,ಫೆ.24 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕದಂಬ ರಂಗ ವೇದಿಕೆ ಸಂಯುಕ್ತವಾಗಿ ರಂಗ ಸಂಜೆ ಹಿರಿಯ ವೃತ್ತಿರಂಗ ಕಲಾವಿದ ಮಹಮ್ಮದ್ ಪೀರ್ ವಿಷಯವಾಗಿ ವಿಚಾರಗೋಷ್ಠಿಯನ್ನು ಫೆ.26ರ ಸಂಜೆ 5ಕ್ಕೆ ಅರಮನೆ ಉತ್ತರದ್ವಾರದಲ್ಲಿರುವ ಕಸಾಪ ಸಭಾಂಗಣದಲ್ಲಿ ಆಯೋಜಿಸಿದೆ.
ರಂಗಕರ್ಮಿ ಹೆಚ್.ಎಸ್.ಗೋವಿಂದೇಗೌಡ ಉದ್ಘಾಟಿಸುವರು, ಈಚನೂರು ಕುಮಾರ್ ವಿಷಯ ಮಂಡಿಸುವರು, ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)