ಮನರಂಜನೆಸುದ್ದಿ ಸಂಕ್ಷಿಪ್ತ

ಚಲನಚಿತ್ರಕ್ಕೆ ಕಲಾವಿದರ ಆಡಿಷನ್ ನ.27ರಂದು

scan0028ಮೈಸೂರಿನ ಉಗಮ ಮೋಷನ್ ಪಿಕ್ಚರ್ಸ್ ಸಂಸ್ಥೆಯು “7 ಡೇಸ್ 6ನೈಟ್ಸ್” ಹೆಸರಿನ ಕನ್ನಡ ಚಿತ್ರವನ್ನು ನಿರ್ಮಾಣ ಮಾಡಲಿದ್ದು ಚಿತ್ರದಲ್ಲಿ ಅಭಿನಯಿಸುವ ಕಲಾವಿದರ ಆಡಿಷನ್ ಹಮ್ಮಿಕೊಳ್ಳಲಾಗಿದೆ ಎಂದು ನಿರ್ದೇಶಕ ಮತ್ತು ನಿರ್ಮಾಪಕ ಸಾಲುಹುಂಡಿ ಪರಶಿವಮೂರ್ತಿ ತಿಳಿಸಿದರು.

ಅವರು, ಗುರುವಾರ (ನ.24) ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಡಿಷನ್ ನ.27ರ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಮೈಸೂರಿನ ನಂ.904, ಸಿ.ಹೆಚ್-1, ಗೋಪಾಲಸ್ವಾಮಿ ಕಾಲೇಜು ರಸ್ತೆ, ನಂಜಮಳಿಗೆ ವೃತ್ತ, ಲಕ್ಷ್ಮೀಪುರ ನಡೆಯಲಿದ್ದು 18 ರಿಂದ 23 ವರ್ಷದೊಳಗಿನ ಆಸಕ್ತ ಯುವಕ-ಯುವತಿಯುರು ಸಂದರ್ಶನದಲ್ಲಿ ಭಾಗವಹಿಸಬಹುದು ಸೈಕಲ್ ಸವಾರಿ ಕಡ್ಡಾಯವಾಗಿದೆ. ಅಡಿಷನ್ ಬರುವ ವೇಳೆ ಎರಡು ಭಾವಚಿತ್ರಗಳನ್ನು ತರಬೇಕು ಎಂದು ತಿಳಿಸಿ ಅಡಿಷನ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಚಿತ್ರೀಕರಣ ಆರಂಭವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ಕ್ಯಾಮರಾಮನ್ ಮಹೇಶ್ ತಲಕಾಡ್, ಜಮಾನ ಚಿತ್ರದ ನಾಯಕ ನಟ ಎಸ್.ಜಯಪ್ರಕಾಶ್, ಸಂಗೀತ ನಿರ್ದೇಶಕ ಪ್ರಮೋದ್ ಸ್ಟೀಫನ್, ಸಹ ನಿರ್ಮಾಪಕ ಗುಲ್ಜಾರ ಮಡಿಕೇರಿ, ಊಟಿ ಚಿತ್ರದ ನಾಯಕ ನಟ ನಿಖಿಲ್ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ ಸಂಖ್ಯೆ 9845350536 ಹಾಗೂ 8971616651 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: