ಸುದ್ದಿ ಸಂಕ್ಷಿಪ್ತ
ಉಚಿತ ಉದ್ಯೋಗ ತರಬೇತಿ
ಭಾರತ ಸರ್ಕಾರದ ಧೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಮೈಸೂರು ಜಿಲ್ಲೆಯ ತಾಲ್ಲೂಕಿನ ಗ್ರಾಮಾಂತರ ನಿರುದ್ಯೋಗಿ ಯುವಕ-ಯುವತಿಯರಿಗೆ 3 ತಿಂಗಳ ಉಚಿತ ಕಂಪ್ಯೂಟರ್ ಹಾಗೂ ಸ್ಪೋಕನ್ ಇಂಗ್ಲೀಷ್ ಕೋರ್ಸ್ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ಅಭ್ಯರ್ಥಿಗಳಿಗೆ 3000 ರೂಪಾಯಿ ಶಿಷ್ಯವೇತನ, ಉಚಿತ ಯೂನಿಫಾರಂ, ಟ್ಯಾಬ್ ಹಾಗೂ ಇಂಟರ್ನೆಟ್ ಸೌಲಭ್ಯ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಗಾಗಿ ಮೊಬೈಲ್ ಸಂಖ್ಯೆ 8951680745 ಅನ್ನು ಕರೆ ಮಾಡಿ.