ಸುದ್ದಿ ಸಂಕ್ಷಿಪ್ತ

ವಿಜ್ಞಾನ ಮೇಳ

ಮಡಿಕೇರಿ ಫೆ.26 :- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರಕಾರ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಇವರ ಸಂಯುಕ್ತಾಶ್ರಯದಲ್ಲಿ 2018 ರ ವಿಜ್ಞಾನ ಮೇಳ ಕಾರ್ಯಕ್ರಮವು ಫೆ.28 ರಂದು ಬೆಳಗ್ಗೆ 10.15 ಕ್ಕೆ ಕಾಲೇಜು ಸಭಾಂಗದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಹಿರಿಯ ವೈಜ್ಞಾನಿಕಾಧಿಕಾರಿಯಾದ ಡಾ.ಎ.ಎಂ.ರಮೇಶ್ ಅವರು ಉದ್ಘಾಟನೆ ಮಾಡಲಿದ್ದು, ಪ್ರಾಂಶುಪಾಲರಾದ ಡಾ.ಪಾರ್ವತಿ ಅಪ್ಪಯ್ಯ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಜಯಚಾಮರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಬಿ.ಮನೋಜ್ ಕುಮಾರ್, ರಾಣಿ ಚೆನ್ನಮ್ಮ ವಿ.ವಿಯ ಪ್ರಾಧ್ಯಾಪಕರಾದ ಡಾ.ಜೆ.ಮಂಜಣ್ಣ ಇತರರು ಪಾಲ್ಗೊಳ್ಳಲಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: