ಸುದ್ದಿ ಸಂಕ್ಷಿಪ್ತ

ಕನಕ ಜಯಂತಿ, ಕರ್ನಾಟಕ ಏಕೀಕರಣದ ವಜ್ರಮಹೋತ್ಸವ ನ.27

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಇಂದ ಕನಕ ಜಯಂತಿ, ಕರ್ನಾಟಕ ಏಕೀಕರಣ ವಜ್ರಮಹೋತ್ಸವ ಹಾಗೂ ಕನ್ನಡ ವಿಕಾಸಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನ.27ರ ಭಾನುವಾರ ಸಂಜೆ 4 ಗಂಟೆಗೆ ಗೋವರ್ಧನ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಮೇಲುಕೋಟೆಯ ವೆಂಗಿಪುರ-ನಂಬಿಮಠದ ಇಳೈಆಳ್ವಾರ್ ಸ್ವಾಮೀಜಿ ಸಾನಿಧ್ಯ ವಹಿಸುವರು. ರಾಜ್ಯ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಕೆ.ರಘುರಾಂ ಉದ್ಘಾಟಿಸುವರು.ವೇದಿಕೆಯ ರಾಜ್ಯ ಗೌರವಾಧ್ಯಕಷ ಹೆಚ್.ಕೆ.ರಾಮು ಅಧ್ಯಕ್ಷತೆ ವಹಿಸುವರು.

ಕನ್ನಡ ವಿಕಾಸ ಶ್ರೀ ಪ್ರಶಸ್ತಿ ಪುರಸ್ಕೃತರು : ಹುಣಸೂರಿನ ಹಿರಿಯ ಕೃಷಿ ವಿಜ್ಞಾನಿ ಡಾ.ಮಹದೇವಸ್ವಾಮಿ, ಮೂಳೆ ಮತ್ತು ಕೀಲು ತಜ್ಞ ಡಾ.ಎ.ಎಚ್.ಹರೀಶ್, ಕೆ.ಎಸ್.ಓ.ಯುನ ಡಾ.ಅಪ್ಪಾಜಿಗೌಡ, ಉಪನ್ಯಾಸಕ ಪ್ರೊ.ರಾಮಲಿಂಗೇಶ್ವರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕಂಠೇಶ್, ಲಷ್ಕರ್ ಠಾಣೆಯ ಅರಕ್ಷಕ ನಿರೀಕ್ಷಿಕ ಹೆಚ್.ಎಂ.ಕಾಂತರಾಜು, ವಿಶ್ರಾಂತ ಶಿಕ್ಷಕಿ ಶೇಷಮ್ಮ, ಲ್ಯಾಂಡ್ ಡೆವಲಪರ್ ಜಿ.ಎಸ್.ಅಶೋಕ ಕುಮಾರ್, ಸಾಹಿತಿ ಬೂವಳ್ಳಿ ಪುಟ್ಟಸ್ವಾಮಿ, ಪತ್ರಿಕಾ ಛಾಯಾಗ್ರಾಹಕ ಗವಿಮಠ ರವಿ, ಹಾಗೂ ಇತರರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

Leave a Reply

comments

Related Articles

error: