ಮೈಸೂರು

ಡಿಸೆಂಬರ್ 2017ರ ಅಂತ್ಯಕ್ಕೆ ರೂ.33024.89 ಲಕ್ಷಗಳನ್ನು ಪಾವತಿ :ವರ್ಷಾಂತ್ಯಕ್ಕೆ ರೂ.65228.73ಲಕ್ಷಗಳನ್ನು ಪಾವತಿ ಮಾಡುವ ಗುರಿ

ಪಾಲಿಕೆಯಲ್ಲಿ 2018-19ರ ಬಜೆಟ್ ಮಂಡನೆ

ಮೈಸೂರು,ಫೆ.27:- 2017-18ನೇ ಸಾಲಿನ ಆಯವ್ಯದಲ್ಲಿ ರೂ.68784.85ಲಕ್ಷಗಳ ಆದಾಯವನ್ನು ನಿರೀಕ್ಷಿಸಲಾಗಿತ್ತು. ಡಿಸೆಂಬರ್ ಅಂತ್ಯಕ್ಕೆ 34886.09 ಲಕ್ಷಗಳ ಆದಾಯ ಕ್ರೋಢೀಕರಿಸಲಾಗಿದ್ದು, ಈ ವರ್ಷಾಂತ್ಯಕ್ಕೆ ರೂ.53045.62ಲಕ್ಷಗಳ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ಪಾಲಿಕೆಯ ತೆರಿಗೆ ನಿರ್ಧರಣಾ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕೆ.ಪಿ.ಅಶ್ವಿನಿ ತಿಳಿಸಿದರು.

ಪಾಲಿಕೆಯಲ್ಲಿ 2018-19ರ ಬಜೆಟ್ ಮಂಡಿಸಿದ ಅವರು 2017-18ನೇ ಸಾಲಿನ ಪಾವತಿಗಳಲ್ಲಿ ರೂ.87368.11ಲಕ್ಷಗಳಿಗೆ ಆಯವ್ಯಯದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ನಗರಪಾಲಿಕೆಯು ಸ್ವಯಂ ಸಂಪನ್ಮೂಲಗಳ ಕ್ರೋಢೀಕರಣದ ಹಾಗೂ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳ ಆಧಾರದ ಮೇಲೆ ವೆಚ್ಚ ಭರಿಸಬೇಕಾದ್ದರಿಂದ ಸ್ವಯಂ ಸಂಪನ್ಮೂಲಗಳ ಹಾಗೂ ಅನುದಾನಗಳ ಲಭ್ಯತೆಯನುಸಾರ ಡಿಸೆಂಬರ್ 2017ರ ಅಂತ್ಯಕ್ಕೆ ರೂ.33024.89 ಲಕ್ಷಗಳನ್ನು ಪಾವತಿ ಮಾಡಲಾಗಿದ್ದು, ಪ್ರಸ್ತುತ ವರ್ಷಾಂತ್ಯಕ್ಕೆ ರೂ.65228.73ಲಕ್ಷಗಳನ್ನು ಪಾವತಿ ಮಾಡುವ ಗುರಿ ಹೊಂದಿದೆ ಎಂದರು. 2018-19ರಲ್ಲಿ ಪ್ರಾರಂಭ ಶಿಲ್ಕು 14748.86 , ಜಮೆ 56505.47 ಒಟ್ಟು 71254.33,ಪಾವತಿಗಳು 70547.19, ಆಖೈರು ಶಿಲ್ಕು 707.13 ಇದ್ದು, ಸಾರ್ವಜನಿಕ ಕ್ಷೇಮಕ್ಕಾಗಿ ಸ್ವಚ್ಛ ಪರಿಸರಕ್ಕಾಗಿ ಸಾಮಾಜಿಕ ಆರ್ಥಿಕ ಸಮಸ್ಯೆಗಳ ನಿವಾರಣೆಗಾಗಿ ನಾವು ಇಂದು ತೆರಿಗೆ ಕೊಡದಿದ್ದರೆ ಮುಂದೆ ನಾವು ಹೊರಲಾರದಷ್ಟು ದುಬಾರಿಯಾಗಲಿದೆ ಎಂದರು. 2018-19ನೇ ಸಾಲಿಗೆ ಹಲವು ಮೂಲಗಳಿಂದ ಸಂಪನ್ಮೂಲವನ್ನು ನಿರೀಕ್ಷಿಸಲಾಗಿದೆ. 2017-18ನೇ ಸಾಲಿನಲ್ಲಿ ಆಸ್ತಿ ತೆರಿಗೆ ಹಾಗೂ ಖಾತಾ ವರ್ಗಾವಣೆ ಶುಲ್ಕ, ಖಾತಾ ಪ್ರತಿಶುಲ್ಕ ಸೇರಿದಂತೆ ಈ ಬಾಬ್ತಿನಲ್ಲಿ ಕಂದಾಯ ಶಾಖೆಯಿಂದ ರೂ. 17512.00ಲಕ್ಷಗಳನ್ನು ನಿರೀಕ್ಷಿಸಲಾಗಿದ್ದು, ಡಿಸೆಂಬರ್ 2017ರ ಅಂತ್ಯಕ್ಕೆ ರೂ.9067.13ಲಕ್ಷಗಳನ್ನು ವಸೂಲಿ ಮಾಡಲಾಗಿದೆ. ಈ ವರ್ಷಾಂತ್ಯಕ್ಕೆ ರೂ.11502.00ಲಕ್ಷಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದ್ದು, 2018-19ನೇ ಸಾಲಿಗೆ ಈ ಬಾಬ್ತಿನಲ್ಲಿ ರೂ.12702.00ಲಕ್ಷಗಳನ್ನು ನಿರೀಕ್ಷಿಸಲಾಗಿದೆ. ಈ ಬಾಬ್ತಿನಲ್ಲಿ ನೀರು ಸರಬರಾಜು ಶುಲ್ಕವಾಗಿ ರೂ.5000.00ಲಕ್ಷಗಳು ಒಳಚರಂಡಿ ನಿರ್ವಹಣಾ ಕರವಾಗಿ ರೂ.1500.00ಲಕ್ಷಗಳನ್ನು ಹಾಗೂ ನೀರು ಸರಬರಾಜು ಸಂಬಂಧಿತ ಇತರೆ ಬಾಬ್ತುಗಳಿಂದ ರೂ.850.00ಲಕ್ಷಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಯೋಜನೆಗಳು ಮತ್ತು ನಿಬಂಧನೆಗಳು-ನಗರ ಮತ್ತು ಪಟ್ಟಣ ಯೋಜನೆಯಲ್ಲಿ ಕಟ್ಟಡ ಪರವಾನಗಿ ಶುಲ್ಕ, ನೆಲಬಾಡಿಗೆಶುಲ್ಕ, ರಸ್ತೆ ಅಗೆತ ಶುಲ್ಕ, ಉತ್ತಮತೆ ಶುಲ್ಕ, ಪರಿಶೀಲನಾ ಶುಲ್ಕ,ನೀರಿನ ಸಂಪರ್ಕ ಶುಲ್ಕ,ಕಟ್ಟಡಪೂರ್ಣಗೊಂಡ ವರದಿ, ದಂಡ ಮತ್ತು ಜುಲ್ಮಾನೆ, ಒಳಚರಂಡಿ ಶುಲ್ಕಗಳು ಹಾಗೂ ಯೋಜನೆಗೆ ಸಂಬಂಧಿಸಿದ ಇತರೆ ಮೂಲಗಳಿಂದ ಒಟ್ಟು ರೂ.982.50ಲಕ್ಷ ಆದಾಯವನ್ನು ನಿರೀಕ್ಷಿಸಲಾಗಿದೆ. ಉದ್ದಿಮೆ ಪರವಾನಿಗೆಯಿಂದ ರೂ.500.00ಲಕ್ಷಗಳ ಆದಾಯವನ್ನು ನಿರೀಕ್ಷಿಸಲಾಗಿದೆ. ವಾಣಿಜ್ಯ ಸಂಕೀರ್ಣಗಳು ಮತ್ತು ಮಾರುಕಟ್ಟೆಗಳ ಬಾಡಿಗೆ ಹಾಗೂ ಗರುಡಮಾಲ್ ನೆಲಗುತ್ತಿಗೆ ಬಾಡಿಗೆಯಿಂದ 37.77ಲಕ್ಷರೂ.ಗಳನ್ನು ನಿರೀಕ್ಷಿಸಲಾಗಿದೆ. ನಗರವನ್ನು ಸ್ಲಂ ಮುಕ್ತ ನಗರವನ್ನಾಗಿ ರೂಪಿಸಲು ಸರ್ಕಾರದಿಂದ 300.00ಲಕ್ಷಗಳ ಅನುದಾನವನ್ನು ನಿರೀಕ್ಷಿಸಲಾಗಿದೆ.ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಎಫ್.ಎಫ್.ಸಿ ಅನುದಾನದಿಂದ ಬರಪರಿಹಾರ ಯೋಜನೆಯಲ್ಲಿ ರೂ.100.00ಲಕ್ಷಗಳನ್ನು, ದಸರಾ ವಿಶೇಷ ಅನುದಾನವಾಗಿ ರೂ.1000.00ಲಕ್ಷಗಳನ್ನು, ಸ್ವಚ್ಛ ಭಾರತ ಮಿಷನ್ ಅನುದಾನ ರೂ.100.00ಲಕ್ಷಗಳು , ಅಮೃತ್ ಯೋಜನೆ ಅನುದಾನ ರೂ.100.00ಲಕ್ಷಗಳನ್ನು ಹಾಗೂ ನಲ್ಕ್ ಯೋಜನೆಯ ಅನುದಾನವಾಗಿ ರೂ.200.00ಲಕ್ಷಗಳನ್ನು ನಿರೀಕ್ಷಿಸಲಾಗಿದೆ. ಎಸ್.ಎ.ಎಸ್ ಆಸ್ತಿ ತೆರಿಗೆ ಪಾವತಿ ಫಾರಂಗಳ  ಪರಿಶೀಲನೆ, ಆಸ್ತಿಗಳ ಅಳತೆ ಮಾಡಿ ಪರಿಶೀಲಿಸುವುದು, ಹಾಗೂ ಕಡಿಮೆ ತೆರಿಗೆ ಘೋಷಿಸಿಕೊಂಡಿರುವ ಆಸ್ತಿ ಮಾಲೀಕರುಗಳಿಗೆ ನೋಟೀಸ್ ನೀಡಿ ಕರಾರುವಕ್ಕಾಗಿ ಬರಬೇಕಾದ ತೆರಿಗೆ ವಸೂಲಾತಿಗೆ ಕ್ರಮವಹಿಸಲಾಗುತ್ತಿದ್ದು, ಮುಂದಿನ ಸಾಲುಗಳಲ್ಲಿಯೂ ಮುಂದುವರಿಸಲಾಗುವುದು ಎಂದರು. ಪಾಲಿಕೆಯ ಅಧಿಕಾರಿ,ನೌಕರರು ಸದಸ್ಯರುಗಳ ಕ್ರೀಡಾ ಚಟುವಟಿಕೆಗಾಗಿ ಈ ಸಾಲಿನ ಆಯವ್ಯಯದಲ್ಲಿ ಪಾಲಿಕೆ ತನ್ನದೇ ಆದ ಸ್ಪೋರ್ಟ್ಸ್ ಕ್ಲಬ್ ನಿರ್ಮಿಸಲು ತೀರ್ಮಾನಿಸಿದ್ದು, ಈ ಉದ್ದೇಶಕ್ಕಾಗಿ ಪಾಲಿಕೆಯ ನಿಧಿಯಿಂದ ರೂ.200.00ಲಕ್ಷಗಳನ್ನು ಕಾಯ್ದಿರಿಸಲಾಗಿದೆ,.ಮಹಿಳಾ ಸದನ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಪಾಲಿಕೆ ನಿಧಿಯಿಂದ ರೂ.100.00ಲಕ್ಷಗಳನ್ನು ಕಾಯ್ದಿರಿಸಲಾಗುತ್ತದೆ. 2018-19ನೇ ಸಾಲಿನಲ್ಲಿ ನಗರವ್ಯಾಪ್ತಿಯ ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 2ಈಜುಕೊಳಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಆಯವ್ಯಯದಲ್ಲಿ ರೂ.100.00ಲಕ್ಷಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು. ನಗರ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರುಗಳಿಗೆ ಆಯ್ದ ಭಾಗಗಳಲ್ಲಿ ಸ್ನಾನಗೃಹ, ಮತ್ತು ಇ-ಟಾಯ್ಲೆಟ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.ಮಹಾರಾಣಿ ಕಾಲೇಜು ವೃತ್ತದಲ್ಲಿ ಸ್ಕೈವಾಕ್ ನಿರ್ಮಾಣ, ಪರಿಣಾಮಕಾರಿ ಸಂಚಾರಿ ನಿಯಂತ್ರಣ ವ್ಯವಸ್ಥೆ, ಆಟದ ಮೈದಾನಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ನಗರ ಹಸರೀಕರಣಕ್ಕಾಗಿ 400ಉದ್ಯಾನವನಗಳ ಪೈಕಿ 100ಉದ್ಯಾನವನಗಳನ್ನು ಪಾಲಿಕೆಯ ವತಿಯಿಂದ ಅಭಿವೃದ್ಧಿಗೊಳಿಸಲಾಗುವುದು. ಪಾಲಿಕೆಯ 155ನೇ ವರ್ಷಾಚರಣೆಯನ್ನು ಆಚರಿಸಲಾಗುತ್ತಿದ್ದು, 15.00ಲಕ್ಷರೂ ಕಾಯ್ದಿರಿಸಲಾಗಿದೆ. ಪೌರಕಾರ್ಮಿಕರಿಗೆ ಜೀವವಿಮೆ, ಸ್ಮಶಾನ ಅಭಿವೃದ್ಧಿ ನಿರ್ವಹಣೆ, ಪರಿಶಿಷ್ಟಜಾತಿ/ವರ್ಗದ ಕಲ್ಯಾನ ಕಾರ್ಯಕ್ರಮಗಳನ್ನು, ವಿಶೇಷ ಚೇತನರ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭ ಮೇಯರ್ ಬಿ.ಭಾಗ್ಯವತಿ, ಉಪಮೇಯರ್ ಇಂದಿರಾ ಎಂ. ಆಯುಕ್ತ ಜಿ.ಜಗದೀಶ್ ಸದಸ್ಯರಾದ ಶಿವಕುಮಾರ್,ಡಿ.ನಾಗಭೂಷಣ್, ಎಂ.ಕೆ.ಶಂಕರ್, ರಾಜಲಕ್ಷ್ಮಿ, ಫೈರೋಜ್ ಖಾನ್, ಎಸ್.ಉಮಾಮಣಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: