ಮೈಸೂರು

ಪ್ರೊ.ಕೆ.ಎಸ್ ರಂಗಪ್ಪ ಅವರಿಗೆ ಟಿಕೇಟ್ ನೀಡದಂತೆ ಕೆ.ಶಿವರಾಮ್ ಒತ್ತಾಯ

ಮೈಸೂರು,ಫೆ.27:- ರಾಜಕೀಯಕ್ಕೆ ಪ್ರವೇಶಗೈದ ಪ್ರೊ. ಕೆಎಸ್ ರಂಗಪ್ಪ  ಅವರಿಗೆ ಒಂದಲ್ಲ ಒಂದು ರೀತಿ ಅಡೆತಡೆಗಳುಂಟಾಗುತ್ತಿದ್ದು, ಮುಕ್ತವಿವಿ ಮಾನ್ಯತೆಗೆ  ಮುಕ್ತ ವಿವಿ ಶೈಕ್ಷಣಿಕ ಸಮಿತಿ ರಚಿಸಲು ವಿಶ್ರಾಂತ ಕುಲಪತಿಗಳು ನಿರ್ಧರಿಸಿದ್ದು, ಪ್ರೊ. ಕೆ.ಎಸ್ ರಂಗಪ್ಪ ಅವರ ರಾಜಕೀಯ ಭವಿಷ್ಯ ತೂಗುಗತ್ತಿಯಾಗಿದೆ.

ವಿಶ್ರಾಂತ ಕುಲಪತಿ ಪ್ರೋ ರಾಮೇಗೌಡ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆಯಾಗಲಿದ್ದು, ಸಮಿತಿಯ ಉದ್ದೇಶ ಮಾನ್ಯತೆ ಸಿಗವಂತೆ ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಹಾಗೂ ಸಚಿವರುಗಳ ಗಮನ ಸೆಳೆದು ಮಾನ್ಯತೆ ದೊರಕಿಸಿ ಕೊಡುವುದಾಗಿದೆ. ಮತ್ತೊಂದು ಮುಕ್ತ ವಿವಿ ಮುಚ್ಚಲು ಕಾರಣ ಕರ್ತರಾದ ಕ್ರಮಕ್ಕೆ ಒತ್ತಾಯಿಸುವುದಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಸಿಂಡಿಕೇಟ್ ಸದಸ್ಯ ಕೆ. ಶಿವರಾಮ್ ಹೇಳಿದ್ದಾರೆ.

ಲಕ್ಷಾಂತರ ವಿದ್ಯಾರ್ಥಿಗಳ ಜೊತೆ ಚೆಲ್ಲಾಟ ವಾಡಿರುವ ರಂಗಪ್ಪ ಅವರಿಗೆ ಟಿಕೇಟ್ ನೀಡಬಾರದು.ಚುನಾವಣೆಯಲ್ಲಿ ನಿಲ್ಲಲು ರಂಗಪ್ಪನವರಿಗೆ ನೈತಿಕತೆ ಇಲ್ಲ. ಅವರ ಮೇಲೆ ಈಗಾಗಲೇ ಎಫ್ ಐ ಆರ್  ಸೇರಿದಂತೆ ಸಾಕಷ್ಟು ಕೇಸುಗಳು ದಾಖಲಾಗಿದೆ. ಇಂತವರನ್ನು ಪಕ್ಷದಿಂದ ಕೈ ಬಿಡುವಂತೆ  ಜೆಡಿಎಸ್ ವರಿಷ್ಠರನ್ನು ಕೆ. ಶಿವರಾಮ್ ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: