ಕರ್ನಾಟಕಮೈಸೂರು

ಹಳೆ ಸಂತೆಪೇಟೆಯಲ್ಲಿ ಬೃಹತ್ ಬೆಂಕಿ ಅವಗಡ : ಮೂರು ಅಂಗಡಿಗಳು ಭಸ್ಮ

ನಗರದ ಹಳೆಸಂತೆಪೇಟೆಯಲ್ಲಿ ಬೃಹತ್ ಪ್ರಮಾಣದ ಬೆಂಕಿ ಅವಘಡ ಸಂಭವಿಸಿ ಮೂರು ಅಂಗಡಿಗಳು ಭಸ್ಮವಾಗಿವೆ. ಘಟನೆಯು ಬುಧವಾರ ಬೆಳಿಗ್ಗೆ ನಡೆದಿದ್ದು ಹಳೆ ಸಂತೆಪೇಟೆ ಬೀದಿಯ ಮೂರನೇ ಅಡ್ಡರಸ್ತೆಯಲ್ಲಿರುವ ದಿವ್ಯಶ್ರೀ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿದೆ.

ಕರ್ಪೂರ ಮತ್ತು ಸಂಬ್ರಾಣಿಯ ವ್ಯಾಪಾರಿಯಾದ ನಾಗಮ್ಮ ಅಂಗಡಿಯ ಬಾಗಿಲನ್ನು ರಾತ್ರಿ ಸುಮಾರು 12 ಗಂಟೆಗೆ ಮುಚ್ಚಿಕೊಂಡು ಮನೆಗೆ ಹೋಗಿದ್ದಾಳೆ,  ಅವಳು ತೆರಳಿದ ನಂತರ ಕಟ್ಟಡದಲ್ಲಿ ಬೆಂಕಿಯು ಸ್ಫೋಟಗೊಂಡಿದೆ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಅನಾಹುತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಬೆಂಕಿಯು ಪಕ್ಕದಲ್ಲಿದ್ದ ಮತ್ತೆರಡು ಅಂಗಡಿಗಳಿಗೂ ಅವರಿಸಿದೆ.

ದೇವರಾಜ ಪೊಲೀಸ್ ಠಾಣೆಯ ಗಸ್ತು ತಿರುಗುತ್ತಿದ್ದ ಪೊಲೀಸರು ಬೆಂಕಿಯನ್ನು ಗಮನಿಸಿ ಬೆಳಿಗಿನ ಜಾವ ಸುಮಾರು 4:30ರ ಸುಮಾರಿಗೆ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ.

ಬೆಳಗಿನ ಜಾವ 5 ಗಂಟೆಗೆ ಆಗಮಿಸಿದ ಅಗ್ನಿಶಾಮಕ ದಳದವರು ಕಾರ್ಯಾಚರಣೆ ಆರಂಭಿಸಿದರು,  ಬೆಳಿಗ್ಗೆ 9 ಗಂಟೆ ವೇಳೆಗೆ ಸಂರ್ಪೂಣವಾಗಿ ಬೆಂಕಿ ನಂದಿಸಿದರು. ಹತ್ತು ವ್ಯಾನ್ ಗಳ ನೀರನ್ನು ಬೆಂಕಿ ನಂದಿಸಲು ಬಳಸಲಾಯಿತು. ಬೆಂಕಿಯ ಝಳಕ್ಕೆ ಕಟ್ಟಡದ ಗೋಡೆಯಲ್ಲಿ ಬಿರುಕು ಮೂಡಿದ್ದು 50 ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ನಗರಪಾಲಿಕೆ ಸದಸ್ಯ ಪ್ರಶಾಂತ ಗೌಡ, ದೇವರಾಜ ವಿಭಾಗದ ಪೊಲೀಸ್ ಕಮಿಷನರ್ ರಾಜಶೇಖರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

comments

Related Articles

error: