
ಕರ್ನಾಟಕಪ್ರಮುಖ ಸುದ್ದಿ
ವಿದ್ವತ್ ಹಲ್ಲೆ ಪ್ರಕರಣ: ಮಾ.2ಕ್ಕೆ ನಲಪಾಡ್ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ
ಬೆಂಗಳೂರು,ಫೆ.28-ಶಾಂತಿನಗರದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ವಿದ್ವತ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ 63ನೇ ಸೆಷನ್ಸ್ ನ್ಯಾಯಾಲಯ ಮಾ.2 ರಂದು ಜಾಮೀನು ಅರ್ಜಿ ಕುರಿತು ಆದೇಶ ನೀಡುವುದಾಗಿ ತಿಳಿಸಿದೆ.
ಮಂಗಳವಾರ ಇತರೆ ಆರೋಪಿಗಳ ಪರ ವಕೀಲ ಎಸ್.ಬಾಲನ್ ದೀರ್ಘ ವಾದ ಮಂಡಿಸಿದರು. ಅವರ ನಂತರ ನಲಪಾಡ್ ಪರ ವಕೀಲ ಟಾಮಿ ಸೆಬಾಸ್ಟಿಯನ್ ಮತ್ತು ವಿಶೇಷ ಸಾರ್ವಜನಿಕ ಅಭಿಯಂತರ (SPP) ಶ್ಯಾಮ್ ಸುಂದರ್ ಅವರು ವಾದ ಮಂಡಿಸಿದರು. ಮೂವರು ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು ಮಾ.2ಕ್ಕೆ ಆದೇಶವನ್ನು ಕಾಯ್ದಿರಿಸಿದರು. ಇದರಿಂದ ನಲಪಾಡ್ ಹಾಗೂ ಅವರ ಸಹಚರರು ಮಾ.2ರ ತನಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಳಿಯಬೇಕಾಗಿದೆ.
ನಿನ್ನೆ(ಫೆ.27) ರಂದು ಶ್ಯಾಮ್ ಸುಂದರ್ ಮತ್ತು ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು. ಸಮಯದ ಅಭಾವ ಹಾಗೂ ಹೆಚ್ಚಿನ ವಾದ ಮಂಡನೆಗೆ ಅವಕಾಶ ಕೇಳಿದ ಕಾರಣ ಇಂದು ಸಹ ವಿಚಾರಣೆ ನಡೆಸಲಾಗಿತ್ತು. (ವರದಿ-ಎಂ.ಎನ್)