ಮೈಸೂರು

ಇ.ವಿ.ಎಂ ಹಾಗೂ ವಿವಿಪ್ಯಾಟ್ ಮೊದಲ ಹಂತದ ಪರಿಶೀಲನೆ

ಮೈಸೂರು ಫೆ.28:- ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ಮತದಾನಕ್ಕಾಗಿ ಜಿಲ್ಲೆಗೆ ತರಲಾಗಿರುವ ವಿವಿಪ್ಯಾಟ್ ಹಾಗೂ ಇವಿಎಂ ಗಳ ಮೊದಲ ಹಂತದ ಪರಿಶೀಲನೆಯನ್ನು ಆರ್.ಎಂ.ಸಿ ಬಳಿ ಇರುವ ಮೈಸೂರ್ ಒನ್ ವೇರ್ ಹೌಸ್‍ನಲ್ಲಿ ಆರಂಭಿಸಲಾಗಿದೆ.
ನಿನ್ನೆ ನಡೆದ ಪರಿಶೀಲನೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಂದೀಪ್ ಡಿ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯಲ್ಲಿ ಭಾಗವಹಿಸಿದ್ದ ವಿವಿಧ ಪಕ್ಷಗಳ ನಿಯೋಜಿತ ವ್ಯಕ್ತಿಗಳೊಂದಿಗೆ ಚರ್ಚಿಸಿದರು.
ಪರಿಶೀಲನೆಯಲ್ಲಿ ಬಿ.ಇ.ಎಲ್ ಇಂಜಿನಿಯರ್ ಪ್ರೇಮ್‍ಚಂದ್, ಸುಬ್ರಮಣೈ ಜಿ, ಕೆ.ಜಿ ವಿರೇಶ್, ವಿವಿಧ ಪಕ್ಷಗಳಿಂದ ನಿಯೋಜಿಸಿರುವ ಪಿ.ಎಸ್.ರಾಜಶೇಖರ್ ಮೂರ್ತಿ, ರಘುರಾಜೇ ಅರಸ್,  ಹಾಗೂ ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: