ಮೈಸೂರು

ವೃತ್ತಿ ರಹದಾರಿ ನವೀಕರಣ ಮೇಳಕ್ಕೆ ಚಾಲನೆ: ಪರವಾನಗಿ ನವೀಕರಿಸಲು ವಲಯಗಳಲ್ಲಿ ಆಗುತ್ತಿರುವ ತಾರತಮ್ಯ ತಡೆಗಟ್ಟಲು ಮನವಿ

ಮೈಸೂರು,ಫೆ.28:- ಹೋಟೆಲ್ ಮಾಲಿಕರ ಸಂಘ ಮತ್ತು ಹೋಟೆಲ್ ಮಾಲಿಕರ ಸಂಘದ ಧರ್ಮದತ್ತಿ  ವತಿಯಿಂದ ಮೈಸೂರು ನಗರಪಾಲಿಕೆಯ ‘ವೃತ್ತಿ ರಹದಾರಿ ನವೀಕರಣ ಮೇಳವನ್ನು ಆಯೋಜಿಸಲಾಗಿತ್ತು.

ಹೋಟೆಲ್ ಮಾಲೀಕರ ಸಂಘದಲ್ಲಿ ನಡೆದ ಕಾರ್ಯಕ್ರಮವನ್ನು ಪಾಲಿಕೆಯ ಆಯುಕ್ತ ಜಿ.ಜಗದೀಶ್ ಉದ್ಘಾಟಿಸಿದರು. ಈ ಸಂದರ್ಭ ಹಲವರು ತಮ್ಮ ಪರವಾನಗಿಯನ್ನು ನವೀಕರಿಸಿಕೊಂಡರು. ಅಷ್ಟೇ ಅಲ್ಲದೇ ಈಗಾಗಲೇ ಹೊಂದಿರುವ ಪರವಾನಗಿಯನ್ನು ನವೀಕರಿಸಲು ವಲಯಗಳಲ್ಲಿ ಆಗುತ್ತಿರುವ ತಾರತಮ್ಯವನ್ನು ತಡೆಗಟ್ಟಲು ಮನವಿ ಮಾಡಿದರು. ಮೈಸೂರಿನ ಮಹಾನಗರ ಪಾಲಿಕೆ ,ಮುಡಾ ಮತ್ತು ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಬರುವ ಹೋಟೆಲ್ ಗಳ ಪರವಾನಗಿಗಳನ್ನು ನವೀಕರಿಸುವ ಕಾರ್ಯ ಮತ್ತು ಕಂದಾಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಏಕರೂಪ ತೆರಿಗೆ ಕಟ್ಟುವಂತೆ ನಗರ ಪಾಲಿಕೆ ಹೇಳುತ್ತದೆ ಆದರೆ ವಲಯಗಳಲ್ಲಿ ಇದನ್ನು ಪಾಲಿಸದೆ ಇರುವುದು ಕಂಡು ಬರುತ್ತಿದೆ ಎಂಬ ಮಾತು ಈ ಸಂದರ್ಭ ಕೇಳಿ ಬಂತು. ಡಬ್ಬಲ್ ಟ್ಯಾಕ್ಸ್ ಕಟ್ಟುತ್ತಿದ್ದವರು ಇನ್ನು ಮುಂದೆ ಸಿಂಗಲ್ ಟ್ಯಾಕ್ಸ್ ಕಟ್ಟುವಂತೆ ಪಾಲಿಕೆ ಅಧಿಕಾರಿಗಳು ಮತ್ತು ಮೇಯರ್ ಗೆ ಮನವಿ ಸಲ್ಲಿಸಿದರು. ಬೇಕಾದರೆ ನವೀಕರಿಸುವ ಚಾರ್ಜ್  ಹೆಚ್ಚಿಸಿ ಆದರೆ ತೆರಿಗೆ ಜಾಸ್ತಿ ಮಾಡದಂತೆ ಮನವಿ ಮಾಡಿಕೊಂಡರು.

ಈ ಸಂದರ್ಭ  ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ಚಲುವೇಗೌಡ,  ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಟಿ.ಚಲುವೇಗೌಡ, ಹೋಟೆಲ್ ಮಾಲಿಕರ ಸಂಘದ ಧರ್ಮದತ್ತಿ  ಅಧ್ಯಕ್ಷ ರವಿಶಾಸ್ತ್ರೀ, ಉಪಾಧ್ಯಕ್ಷ ಅಶೋಕ್, ಸುಬ್ರಹ್ಮಣ್ಯ ಆರ್.ತಂತ್ರಿ ಮತ್ತಿತರರು  ಉಪಸ್ಥಿತರಿದ್ದರು.(ಎಸ್.ಎಚ್)

Leave a Reply

comments

Related Articles

error: