
ಮೈಸೂರು
ಹೊಸ ನೋಟು ನೀಡುವಂತೆ ರೈಲ್ವೆ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘ ಮನವಿ
ಚಲಾವಣೆ ರದ್ದುಗೊಂಡಿರುವ 1000 ಮತ್ತು 500 ರು. ನೋಟುಗಳನ್ನು ನೀಡದಿರುವಂತೆ ಅಕ್ಕಿ, ಸಿಮೆಂಟ್, ಮತ್ತು ಗೊಬ್ಬರ ಕಾಂಟ್ರಾಕ್ಟ್ ದಾರರಿಗೆ ರೈಲ್ವೆ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘ ಮನವಿ ಮಾಡಿದೆ.
ಈ ನೋಟುಗಳನ್ನು ಬದಲಾವಣೆ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಮುಂದಿನ ವಹಿವಾಟು ನಡೆಸಲು ಕಷ್ಟವಾಗಿದೆ. ಪೆಟ್ರೋಲ್ ಬಂಕ್ಗಳಲ್ಲೂ ಕೂಡ ಈ ನೋಟುಗಳನ್ನು ಸ್ವೀಕರಿಸುತ್ತಿಲ್ಲವಾದ್ದರಿಂದ ಲಾರಿಗಳಿಗೆ ಪೆಟ್ರೋಲ್ ತುಂಬಿಸುವುದೂ ದುಸ್ತರವಾಗುತ್ತಿದೆ. ಅಂಗಡಿ-ಮುಂಗಟ್ಟು ಎಲ್ಲಿಯೂ ಈ ನೋಟುಗಳು ನಡೆಯುತ್ತಿಲ್ಲವಾದ್ದರಿಂದ ನೋಟುಗಳನ್ನು ಸ್ವೀಕರಿಸುವುದು ಅಸಾಧ್ಯ.
ಹೀಗಾಗಿ ಮುಂಬರುವ ದಿನಗಳಲ್ಲಿ ಅಕ್ಕಿ, ಸಿಮೆಂಟ್ ಮತ್ತು ರಸಗೊಬ್ಬರ ಕಂಟ್ರಾಕ್ಟುದಾರರು ಹೊಸ ನೋಟುಗಳನ್ನೇ ನೀಡುವ ಮೂಲಕ ಸಹಕರಿಸುವಂತೆ ಸಂಘ ಮನವಿ ಮಾಡಿಕೊಂಡಿದೆ.