ಕರ್ನಾಟಕಮೈಸೂರು

ವಿದ್ಯಾವಿಕಾಸ ಕಾಲೇಜಿನಲ್ಲಿ ಎಂ.ಕಾಂ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಉನ್ನತ ಮಟ್ಟದ ಜ್ಞಾನ ಗ್ರಹಿಕೆ, ನೈಪುಣ್ಯತೆ ಮತ್ತು ಮನೋದೃಢತೆ ಇಂದಿನ ಕಾಲಮಾನದಲ್ಲಿ ಅತಿ ಮುಖ್ಯ ಎಂದು ಟ್ರಿಟಾನ್ ವಾಲ್ಯೂಸ್ ಲಿಮಿಟೆಡ್‍ನ ಹಿರಿಯ ವ್ಯವಸ್ಥಾಪಕ ವಿನಾಯಕ ವಿ.ಭಟ್ ಅಭಿಪ್ರಾಯಪಟ್ಟರು.

ಅವರು ಈಚೆಗೆ ವಿದ್ಯಾವಿಕಾಸ ಕಾಲೇಜಿನ ಆವರಣದಲ್ಲಿ ಎಂ.ಕಾಂ. ವಿದ್ಯಾರ್ಥಿಗಳ 6ನೇ ಬ್ಯಾಚ್‍ನ ಸ್ವಾಗತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿ, ‘ವಿದ್ಯಾ ದದಾತಿ ವಿನಯಂ’, ವಾಣಿಜ್ಯ ವಿಭಾಗದಲ್ಲಿ ವಿಫುಲವಾದ ಉದ್ಯೋಗ ಅವಕಾಶಗಳು ಲಭ್ಯವಾಗುತ್ತಿದ್ದು, ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆಗಳಿಂದ ಹೊರಬಂದು ಪರಿಶ್ರಮದಿಂದ ಏಕಾಂಗಿಯಾಗಿ ಸ್ಪರ್ಧಾತ್ಮಕ ಪ್ರಪಂಚವನ್ನು ಎದುರಿಸಬೇಕು. ನಾಳೆ ಎನ್ನುವುದನ್ನು ಬಿಟ್ಟು ಉತ್ತಮ ಕೆಲಸಗಳನ್ನು ಇಂದೇ ಮಾಡಬೇಕು ಎಂದು ಕರೆ ನೀಡಿದರು.

ಕಾಲೇಜಿನ ಆಡಳಿತ ಮಂಡಳಿಯ ಖಂಜಾಚಿ ಎಸ್.ಎನ್. ಲಕ್ಷ್ಮೀನಾರಾಯಣ ಮಾತನಾಡಿ 21ನೇ ಶತಮಾನದಲ್ಲಿ ಅವಿದ್ಯಾವಂತರೆಂದರೆ ಓದು-ಬರಹ ಬರದವರು ಎಂದಲ್ಲ, ಜ್ಞಾನ ಸಂಪಾದನೆ ಮಾಡದವರು ಅವಿದ್ಯಾವಂತರು ಎನ್ನುವ ವ್ಯಾಖ್ಯಾನ ನೀಡಿದ ಅವರು, ಹೊಸ ವಿದ್ಯಾರ್ಥಿಗಳು ಧೈರ್ಯ ಮತ್ತು ಪ್ರಬುದ್ಧತೆಯನ್ನು ತೋರಬೇಕು ಎಂದು ಆಶಿಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಎಸ್. ಮರಿಗೌಡ ಕಾಲೇಜು ಸಿಬ್ಬಂದಿ ವರ್ಗವನ್ನು ಪರಿಚಯಿಸಿ ವಿಭಾಗದ ವಿವಿಧ ಕೋರ್ಸ್ಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಪೋಷಕರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಕೋರ್ಸ್ ಮತ್ತು ಕಾಲೇಜಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿದ್ಯಾವಿಕಾಸ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾಲೇಜಿನ ಪ್ರಾಂಶುಪಾಲ ಡಾ.ಎನ್. ಶಂಕರ್ , ಸಹಾಯಕ ಪ್ರಾಧ್ಯಾಪಕಿ ಜಿ.ರಾಜೇಶ್ವರಿ,  ಹಾಗೂ ಸ್ನಾತಕೋತ್ತರ ವಿಭಾಗದ ಸಿಬ್ಬಂದಿ ವರ್ಗ ಹಾಜರಿದ್ದರು.

Leave a Reply

comments

Related Articles

error: