ಸುದ್ದಿ ಸಂಕ್ಷಿಪ್ತ

ನಾಳೆ ನ್ಯಾಯಾಧೀಶ ಪಿ.ಜಿ.ಎಂ.ಪಾಟೀಲ್ ಬೀಳ್ಕೊಡುಗೆ

ಮೈಸೂರು,ಫೆ.28 : ಜೆಎಸ್ಎಸ್ ಕಾನೂನು ಕಾಲೇಜು ಮತ್ತು ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಜಿ.ಎಂ.ಪಾಟೀಲ್ ಅವರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಮಾ.1ರ ಬೆಳಗ್ಗೆ 10ಕ್ಕೆ ಕಾಲೇಜಿನಲ್ಲಿ ಆಯೋಜಿಸಿದೆ.

ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟ್ಟಸೂರಮಠ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಂವಿಧಾನ ತಜ್ಞ ಪ್ರೊ.ಸಿ.ಕೆ.ಎನ್.ರಾಜ, ರಾಜ್ಯ ಮಾನವ ಹಕ್ಕುಗಳ ಯೋಗದ ಪಿ.ಜಿ.ಹುನಗುಂದ, ಕಾಲೇಜಿನ ಕಾರ್ಯದರ್ಶಿ ಪ್ರೊ.ಸುರೇಶ್ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಸಂಪಾದಕ ಹೆಚ್.ಎನ್.ವೆಂಕಟೇಶ್ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: