ಮೈಸೂರು

ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಸದುಪಯೋಗಪಡಿಸಿಕೊಳ್ಳಿ : ಆರ್. ದ್ರುವನಾರಾಯಣ್

ಮೈಸೂರು ಮಾ.1:- ಸಮಾಜ ಕಲ್ಯಾಣ ಇಲಾಖೆಯ 50ಲಕ್ಷ ರೂ. ಕನ್ನಡ ಸಂಸ್ಕೃತಿ ಇಲಾಖೆಯ 10 ಲಕ್ಷ ರೂ. ಹಾಗೂ ಸಂಸದರ ಪ್ರದೇಶಾಭಿವೃದ್ದಿಯಿಂದ 6 ಲಕ್ಷರೂ.ಗಳ ಒಟ್ಟು 66 ಲಕ್ಷ ರೂ. ಅನುದಾನದಲ್ಲಿ   ವರುಣ ಗ್ರಾಮದಲ್ಲಿ ನಿರ್ಮಾಣವಾಗಿರುವ ಹೋಬಳಿ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಸಂಸದ ಆರ್. ದ್ರುವನಾರಾಯಣ್ ಉದ್ಘಾಟಿಸಿದರು.
ವರುಣ ಹೋಬಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು ಈ ಸಮುದಾಯ ಭವನವನ್ನು ಹೋಬಳಿ ಜನರ ಅನುಕೂಲಕ್ಕೆ ನಿರ್ಮಿಸಿದೆ ಅದರ ಉಪಯೋಗವನ್ನು ಎಲ್ಲರು ಪಡೆದುಕೊಳ್ಳುವಂತೆ ಹೇಳಿದರು. ಮುಂದಿನ ದಿನಗಳಲ್ಲಿ ಇದೇ ಸಮುದಾಯ ಭವನದಲ್ಲಿ ಸರಳ ಸಾಮೂಹಿಕ ವಿವಾಹ ಮತ್ತು ದಾಸೋಹ ಕಾರ್ಯಕ್ರಮ ಏರ್ಪಡಿಸುವುದಾಗಿ ತಿಳಿಸಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ಮತ್ತು ಚಿಂತನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ  ಸರ್ಕಾರ ದುಡಿಯುತ್ತಿದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯದ ಅಭ್ಯುದಯಕ್ಕಾಗಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಎಂಬ ಕಾನೂನು ತಂದು ಅವರ ಕಲ್ಯಾಣಕ್ಕೆ ದುಡಿಯುತ್ತಿರುವ ಏಕೈಕ ಸರ್ಕಾರ ಎಂದರು.
ಕಾರ್ಯಕ್ರಮದಲ್ಲಿ ವರುಣ ಕ್ಷೇತ್ರದ ವಸತಿ ಮತ್ತು ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ, ತಾಲೂಕು ಪಂಚಾಯತಿ ಸದಸ್ಯರಾದ ವೀಣಾ ಗುರುಮೂರ್ತಿ, ವರುಣ ಗ್ರಾಮ ಪಂಚಾಯತಿ ಅಧ್ಯಕ್ಷೆ ಕಾಂತಮ್ಮ, ಸದಸ್ಯ ಗುರುಮೂರ್ತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: