ಮೈಸೂರು

ಜೆ.ಎಸ್.ಎಸ್. ಪಬ್ಲಿಕ್ ಶಾಲೆಯಲ್ಲಿ “ಮಾನಸ ಧಾರಾ” ಸಾಂಸ್ಕೃತಿಕ ಹಬ್ಬ

ಮೈಸೂರಿನ ಜೆ.ಪಿ. ನಗರದಲ್ಲಿರುವ ಜೆ.ಎಸ್.ಎಸ್. ಪಬ್ಲಿಕ್ ಶಾಲೆಯಲ್ಲಿ ನ.24, ಗುರುವಾರದಂದು ಎರಡು ದಿನಗಳ ‘ಮಾನಸ ಧಾರ’ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಹಬ್ಬದ ಅಂಗವಾಗಿ ಚರ್ಚಾಸ್ಪರ್ಧೆ, ಶಾಸ್ತ್ರೀಯ – ಯುಗಳ ನೃತ್ಯಸ್ಪರ್ಧೆ ಹಾಗೂ ಪೋಷಕರಿಗಾಗಿ ಏರ್ಪಡಿಸಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಆಂದೋಲನ ದಿನಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಾಧ್ಯಮಗಳ ಮಹತ್ವ ಮತ್ತು ಅವುಗಳನ್ನು ಸೂಕ್ತ ರೀತಿ ಬಳಸಿಕೊಳ್ಳುವ ಬಗ್ಗೆ ಸೂಚ್ಯವಾಗಿ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್. ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಅವರು ಮಾತನಾಡಿ, ಮೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಾಂಸ್ಕೃತಿಕ ಹಬ್ಬದ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ಶಾಲೆಯ ಪ್ರಾಂಶುಪಾಲರಾದ ಎಸ್. ಪರಮೇಶ್ವರಪ್ಪ ಅವರು ತುಂಬು ಹೃದಯದಿಂದ ಸ್ವಾಗತಿಸಿದರು. ಶಾಲೆಯ ಉಪ ಪ್ರಾಂಶುಪಾಲರಾದ ಎಸ್.ಎಲ್. ನಾಗೇಂದ್ರ ಅವರು ವಂದನೆ ಸಲ್ಲಿಸಿದರು.

ನಂತರ ನಡೆದ “ಸಮೂಹ ಮಾಧ್ಯಮಗಳು ಯುಜನತೆಯನ್ನು ದಾರಿತಪ್ಪಿಸುತ್ತಿವೆಯೇ” ಎಂಬ ವಿಷಯದ ಬಗ್ಗೆ ನಗರದ ಹಾಗೂ ರಾಜ್ಯದ ಸುಮಾರು 30 ಸಿ.ಬಿ.ಎಸ್.ಸಿ. ಶಾಲೆಗಳಿಂದ ಆಗಮಿಸಿದ್ದ ಸ್ಪರ್ಧಾರ್ಥಿಗಳು ವಿಷಯದ ಪರ ಮತ್ತು ವಿರೋಧವಾಗಿ ತಮ್ಮ ವಾದ ಮಂಡಿಸಿದರು.

Leave a Reply

comments

Related Articles

error: