ಕರ್ನಾಟಕಮೈಸೂರು

ಭರಚುಕ್ಕಿ ಜಲಪಾತದಲ್ಲಿ ಮುಳುಗಿ ಮೈಸೂರು ವಿದ್ಯಾರ್ಥಿ ಸಾವು

ರಾಜ್ಯ(ಚಾಮರಾಜನಗರ)ಮಾ.1:- ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದಲ್ಲಿ ನಡೆದಿದೆ.

ಮೃತನನ್ನು ಮೈಸೂರಿನ ವಿದ್ಯಾ ವಿಕಾಸ್ ಕಾಲೇಜು ವಿದ್ಯಾರ್ಥಿ ಹರ್ಷವರ್ಧನ್(21) ಎಂದು ಗುರುತಿಸಲಾಗಿದೆ. ಮೈಸೂರಿನ ವಿದ್ಯಾ ವಿಕಾಸ್ ಕಾಲೇಜು ವಿದ್ಯಾರ್ಥಿಯಾದ ಈತ ಆರು ಮಂದಿ ಸ್ನೇಹಿತರೊಡನೆ ಭರಚುಕ್ಕಿಗೆ ತೆರಳಿದ್ದ. ನೀರಿಗಿಳಿದಿದ್ದ ವೇಳೆ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: