Uncategorized

ಪಾಲಿಕೆ ಸದಸ್ಯ ಆರ್.ರವೀಂದ್ರಕುಮಾರ್ ನಾಯಕ್ ಗೆ ಎನ್.ಆರ್.ಕ್ಷೇತ್ರದ ಬಿಜೆಪಿ ಟಿಕೆಟ್ ಗೆ ಒತ್ತಾಯ

ಮೈಸೂರು,ಮಾ.1 : ಮಹಾನಗರ ಪಾಲಿಕೆ 41 ವಾರ್ಡಿನ ಸದಸ್ಯರಾಗಿ ಉತ್ತಮ ಸಮಾಜಸೇವೆ ಸಲ್ಲಿಸುತ್ತಿರುವ ಆರ್ ರವೀಂದ್ರಕುಮಾರ್ ನಾಯಕ್ ಅವರಿಗೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎನ್.ಆರ್.ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಬೇಕೆಂದು ವೀರನಗೆರೆ ವೀರಶೈವ ಮಂಡಳಿ ಒತ್ತಾಯಿಸಿತು.

ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ವೀರಶೈವ ಮಂಡಳಿ ಅಧ್ಯಕ್ಷ ಜಿ.ಸದಾಶಿವ ಮಾತನಾಡಿ, ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ರವೀಂದ್ರ ಕುಮಾರ್ ನಾಯಕ್ ಅವರು ವಿದ್ಯಾರ್ಥಿ ದಿಸೆಯಿಂದಲೂ ಹೋರಾಟ ಹಾಗೂ ಸಮಾಜ ಸೇವಾ ಮನೋಭಾವ ಹೊಂದಿದ್ದಾರೆ, ಎರಡು ಬಾರಿ ನಗರಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದಾರೆ, ಅಲ್ಲದೇ ಜಾತ್ಯತೀತ ಮನೋಭಾವದಿಂದ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸುತ್ತಾರೆ, ಅವರ ಸಮಾಜ ಸೇವೆಯನ್ನು ಪರಿಗಣಿಸಿ ವೀರಶೈವ ಮಹಾ ಮಂಡಳಿಯು ಬೆಂಬಲಿಸಿದ್ದು ಮುಂದಿನ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.

ವೀರಶೈವ ಮಂಡಳಿಯ ಎಸ್.ಬಸವಣ್ಣ, ಕಾರ್ಯದರ್ಶಿ ಎಂ.ಮಹದೇವ್, ಶ್ರೀಕಂಠಮೂರ್ತಿ, ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: