
ಮೈಸೂರು
ಜೆಎಸ್ಎಸ್ ಮೆಡಿಕಲ್ ಕಾಲೇಜಿಗೆ ‘ಬೆಸ್ಟ್ ಗೈಡ್ ಅವಾರ್ಡ್’
ಮೈಸೂರಿನ ಜೆಎಸ್ಎಸ್ ಮೆಡಿಕಲ್ ಕಾಲೇಜಿನ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಮೋಲೆಕುಲರ್ ಬಯಾಲಜಿ ಆ್ಯಂಡ್ ರೀಜೆನೆರೇಟಿವ್ ಮೆಡಿಸಿನ್ (ಸಿಇಎಂಆರ್) ವಿಭಾಗದ ಪ್ರೊ. ಸುಬ್ಬರಾವ್ ವಿ ಮಧುನಪಂತುಲ ಅವರು ಸಾದರಪಡಿಸಿದ ಪ್ರಬಂಧಕ್ಕೆ ಪ್ರಾಜೆಕ್ಟ್ ಕೌನ್ಸಿಲ್ ವತಿಯಿಂದ “ಬೆಸ್ಟ್ ಗೈಡ್ ಅವಾರ್ಡ್” ಲಭಿಸಿದೆ.
ವೇಣುಗೋಪಾಲ ರೆಡ್ಡಿ ಬೊವಿಲ್ಲ, ಜಯಶ್ರೀ ಕೆ, ರೇಖಾ ಟಿ.ಎಸ್, ವಸಂತ್ ಕುಮಾರ್ ಕೆ.ಎಸ್, ಸುಬ್ಬರಾವ್ ವಿ. ಮಧುನಪಂತುಲ ಅವರುಗಳು ರಚಿಸಿರುವ “ಡೆವಲಪ್ಮೆಂಟ್ ಆಫ್ ಎ ಲೋ-ಕಾಸ್ಟ್ ಟಿಶ್ಶೂ ಅರಿ ಫಾರ್ ದಿ ಇವಲೂಷನ್ ಆಫ್ ಬಯೋಮಾರ್ಕರ್ಸ್ ಇನ್ ಕಾನ್ಸರ್ಸ್” ಕೃತಿಯ ಮೇಲೆ ಮಂಡಿಸಿದ ಪ್ರಬಂಧಕ್ಕಾಗಿ ಚೆನ್ನೈನ ಸತ್ಯಬ್ರಹ್ಮ ವಿಶ್ವವಿದ್ಯಾಲಯದಲ್ಲಿ ಕಳೆದ ನ.19 ರಂದು ನಡೆದ ‘ಮೇಕ್ ಇನ್ ಇಂಡಿಯಾ’ ಬಗೆಗಿನ ರಾಷ್ಟ್ರಮಟ್ಟದ ಪ್ರಬಂಧ ಪ್ರಸ್ತುತಿ ಸಮ್ಮೇಳನದ ಅಂತಿಮ ಸುತ್ತಿನಲ್ಲಿ ಈ ಗೌರವ ಲಭಿಸಿದೆ.