ಕರ್ನಾಟಕಮನರಂಜನೆ

ಡಾ.ರಾಜ್ ಹುಟ್ಟುಹಬ್ಬದಂದು ಶಿವಣ್ಣನ ಹೊಸ ಸಿನಿಮಾಗೆ ಮುಹೂರ್ತ

ಬೆಂಗಳೂರು (ಮಾ.1): ಶಿವಣ್ಣ (ಶಿವರಾಜ್ ಕುಮಾರ್) ನಟಿಸಿರುವ ‘ಟಗರು’ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದರ ಜೊತೆಗೆ ‘ಕವಚ’ ಚಿತ್ರದ ಚಿತ್ರೀಕರಣದಲ್ಲೂ ಅವರು ಬ್ಯುಸಿಯಾಗಿದ್ದಾರೆ.

ಇತರ ನಂತರ ಯಾವ ಚಿತ್ರ ಎನ್ನುವ ಅಭಿಮಾನಿಗಳ ಕುತೂಹಲಕ್ಕೆ ಉತ್ತರವೆಂಬಂತೆ, ಡಾ.ರಾಜ್ ಅವರ ಹುಟ್ಟುಹಬ್ಬದಂದೇ ಹೊಸ ಚಿತ್ರವೊಂದು  ಸೆಟ್ಟೇರುತ್ತಿದೆ ಎನ್ನುವ ವಿಷಯ ತಿಳಿದುಬಂದಿದೆ.

ಶಿವರಾಜ್ ಕುಮಾರ್ ಅವರು ಸದ್ಯ ‘ಕವಚ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ. ಸಾಕಷ್ಟು ವರ್ಷಗಳ ನಂತರ ಶಿವಣ್ಣ ರಿಮೇಕ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಅನೌನ್ಸ್ ಆಗಿರುವ ಸಿನಿಮಾಗಳನ್ನ ಬಿಟ್ಟು ಹ್ಯಾಟ್ರಿಕ್ ಹೀರೋ ಮತ್ಯಾವ ಚಿತ್ರದಲ್ಲಿ ಆಕ್ಟ್ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಅದಕ್ಕೆ ತಕ್ಕಂತೆ ಸಾಕಷ್ಟು ದಿನಗಳಿಂದ ಸಾಹಸ ನಿರ್ದೇಶಕ ರವಿವರ್ಮಾ ಅವರು ಶಿವಣ್ಣನ ಸಿನಿಮಾ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಈಗ ಅದೇ ಸಿನಿಮಾಗೆ ಚಾಲನೆ ಸಿಕ್ತಿದೆ.

ಈ ವಿಚಾರವನ್ನ ಖುದ್ದು ರವಿವರ್ಮಾ ಅವರೇ ತಿಳಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಶಿವಣ್ಣನ ಜೊತೆ ಇರುವ ಫೋಟೋ ಹಾಕಿರುವ ನಿರ್ದೇಶಕ ರವಿವರ್ಮಾ ಶಿವಣ್ಣನ ಜೊತೆ ಕೆಲಸ ಮಾಡಲು ಕಾತುರನಾಗಿದ್ದೇನೆ. ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಚಿತ್ರ ಮುಹೂರ್ತ ಆಗಲಿದೆ. ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ಟ್ವೀಟ್ ಮಾಡಿದ್ದಾರೆ

ಈ ಹಿಂದೆ ಶಿವಣ್ಣ ಹಾಗೂ ರವಿವರ್ಮಾ ಕಾಂಬಿನೇಷನ್ ಸಿನಿಮಾವನ್ನ ಜಯಣ್ಣ ನಿರ್ಮಾಣ ಮಾಡುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ ಈಗ ಚಿತ್ರಕ್ಕೆ ಯಾರು ಬಂಡವಾಳ ಹಾಕುತ್ತಾರೆ ಎನ್ನುವ ಸುದ್ದಿ ಮಾತ್ರ ನಿರ್ದೇಶಕ ರವಿವರ್ಮಾ ಬಿಟ್ಟುಕೊಟ್ಟಿಲ್ಲ.

ಚಿತ್ರಕ್ಕೆ ‘ರುಸ್ತುಂ’ ಎಂದು ಹೆಸರಿಡಲಾಗಿದೆ. ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲಿಯೂ ಕೆಲಸ ಮಾಡಿ ಬಂದಿರುವ ರವಿವರ್ಮಾ ‘ರುಸ್ತುಂ’ ಸಿನಿಮಾಗಾಗಿ ಉತ್ತಮ ಕಥೆಯನ್ನ ಮಾಡಿಕೊಂಡಿದ್ದಾರಂತೆ.

(ಎನ್‍ಬಿ)

Leave a Reply

comments

Related Articles

error: