ಮೈಸೂರು

ಸುಶ್ರಾವ್ಯವಾಗಿ ಮೊಳಗಿದ ಹಂಸಲೇಖ ಗೀತೆಗಳ ಸಂಗೀತ ಸಂಭ್ರಮ

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಬಿಇಎಂಎಲ್ ಕನ್ನಡ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಲಾದ ಡಾ.ಹಂಸಲೇಖ ಗೀತೆಗಳ ಗಾಯನ ಸಂಗೀತ ಸಂಭ್ರಮ ಯಶಸ್ವಿಯಾಗಿ ಜರುಗಿತು.

ನಾದಬ್ರಹ್ಮ ಹಂಸಲೇಖ ಅವರ ಸುಮಾರು 22ಕ್ಕೂ ಅಧಿಕ ಗೀತೆಗಳು ನಿನಾದ ಮ್ಯೂಸಿಕಲ್ ಟ್ರಸ್ಟ್ ಸಂಗಡಿಗರ ಸುಶ್ರಾವ್ಯ ಕಂಠದಲ್ಲಿ ಮೂಡಿ ಬಂತು. ಮೊನ್ನೆಯಷ್ಟೇ ಇಹಲೋಕ ತ್ಯಜಿಸಿದ ಸುಪ್ರಸಿದ್ಧ ಗಾಯಕ ಬಾಲಮುರಳಿ ಕೃಷ್ಣ ಅವರು ಹಾಡಿದ ಮುತ್ತಿನ ಹಾರ ಚಿತ್ರದ ದೇವರು ಹೊಸೆದ ಪ್ರೇಮದ ದಾರ ಗೀತೆ ಪ್ರೇಕ್ಷಕರ ಕಣ್ಣಂಚಲ್ಲಿ ಮೆಲುವಾಗಿ ಕಂಬನಿ ಜಾರಿಸಿತ್ತು.

ಗಾಯಕರೊಂದಿಗೆ ಪಕ್ಕ ವಾದ್ಯದಲ್ಲಿ ಎ.ಎಸ್.ಪ್ರಸನ್ನಕುಮಾರ್, ಕೊಳಲಿನಲ್ಲಿ ನೀತು ನಿನಾದ್, ತಬಲದಲ್ಲಿ ಜಗದೀಶ್, ಡೋಲಿನಲ್ಲಿ ರವಿಕಿರಣ್, ಕೀಬೋರ್ಡ್ ನಲ್ಲಿ ಟೋನಿ ಮತ್ತು ವಿನ್ಸೆಂಟ್ ಸಾಥ್ ನೀಡಿದರು.

ಬಿಇಎಂಎಲ್ ನ ಮೈಸೂರಿನ ನಿರ್ದೇಶಕ ಬಿ.ಶಂಕರ್, ಅಧ್ಯಕ್ಷ ಎನ್.ಕೆ.ದೇವದಾಸ್, ಕನ್ನಡ ಸಂಘದ ಅಧ್ಯಕ್ಷ ಟಿ.ಕೆ.ವಿ.ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: